ಚಿಲ್ಲೀಸ್ ಸ್ಪೋರ್ಟ್ಸ ಕ್ಲಬ್ ನ ವಿದ್ಯಾರ್ಥಿಗಳ ಸಾಧನೆ
ಬ್ಯಾಡಗಿ 1: ಪಟ್ಟಣದ ಚಿಲ್ಲೀಸ್ ಸ್ಪೋರ್ಟ್ಸ ಕ್ಲಬ್ ನ ವಿದ್ಯಾರ್ಥಿಗಳು ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ನ್ಯಾಶನಲ್ ಲೆವೆಲ್ ಪ್ರಿಮಿಯರ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಗೆಲ್ಲುವ ಮೂಲಕ ಸಾಧನೆ ಗೈದಿದ್ದಾರೆ. ಕರಾಟೆ ಸ್ಪರ್ಧೆಯಲ್ಲಿ ಕುಮಾರಿ ಪೂರ್ವಿಕ್ ಆರ್ ಲಿಂಗದಳ್ಳಿ ವರ್ಷದ ಕತಾ ಮತ್ತು ಕುಮಿತೆಯಲ್ಲಿ ಪ್ರಥಮ ಸ್ಥಾನ, ತೇಜರಾಜ್ ಕತಾದಲ್ಲಿ ದ್ವಿತೀಯ ಸ್ಥಾನ, ಮಹಮದ್ ಮೆಹರಾಜ್ ಆಲಂ ಎರೆಸೀಮಿ ಕತಾ ಹಾಗೂ ಕುಮಿತೆಯಲ್ಲಿ ತೃತೀಯ ಸ್ಥಾನ, ದಿಗಂತ್ ಎನ್ ಡಿ ಕತಾ ಮತ್ತು ಕುಮಿತೆಯಲ್ಲಿ ಪ್ರಥಮ ಸ್ಥಾನ, ರಕ್ಷಾ ಆರ್ ಲಿಂಗದಹಳ್ಳಿ ಕತಾ ಮತ್ತು ಕುಮಿತೆಯಲ್ಲಿ ಪ್ರಥಮ ಸ್ಥಾನ, ಅಂಕಿತಾ ವಿ ಛತ್ರದ್ ಕತಾದಲ್ಲಿ ದ್ವಿತೀಯ ಸ್ಥಾನ, ಭರತ್ ಕುಮಾರ್ ಜಿ ಬಿಲ್ಲಳ್ಳಿ ಕತಾ ಮತ್ತು ಕುಮಿತೆಯಲ್ಲಿ ಪ್ರಥಮ ಸ್ಥಾನ, ಜಗನ್ ಎಸ್ ಜಾಲಿಹಾಳ್ ಕತಾ ಮತ್ತು ಕುಮಿತೆಯಲ್ಲಿ ಪ್ರಥಮ ಸ್ಥಾನ, ಚಿಂತನ್ ಎಸ್ ಸುಂಕಾಪುರ್ ಕತಾದಲ್ಲಿ ದ್ವಿತೀಯ ಸ್ಥಾನ, ಅನ್ವಿತ್ ವಿ ಛತ್ರದ ಕತಾದಲ್ಲಿ ತೃತೀಯ ಸ್ಥಾನವನ್ನು ಪಡೆದು ಬ್ಯಾಡಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.ಈ ಎಲ್ಲ ವಿದ್ಯಾರ್ಥಿಗಳಿಗೆಸೆನ್ಸಯ್ ಮನೀಷಾ ಎಂ ಕಬ್ಬೂರ ತರಬೇತಿ ನೀಡಿದ್ದಾರೆ. ಶಿಹಾನ್ ನಾರಾಯಣ ಕೆ ಪೂಜಾರ ಅವರು ಎಲ್ಲರಿಗೂ ಬಹುಮಾನ ಜಯಿಸಿದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಗುರುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.