ಧಾರವಾಡ 16: ನಗರದ ಸಿ.ವಿ.ರಾಮನ್ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ ಮಹಮದ್ ರೆಹಾನ್ ವಿಜ್ಞಾನ ತರಗತಿಯಲ್ಲಿ ಓದುತ್ತಿರುವ ಪ್ರಸಕ್ತ ಸಾಲಿನ ರಾಷ್ಟ್ರಮಟ್ಟದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 98.1 ಪ್ರತಿಶತ ಪಡೆದು ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹರಾಗಿದ್ದಾರೆ.
ವಿದ್ಯಾರ್ಥಿ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಗೀರೀಶ ಹಾದಿಮನಿ, ಆಡಳಿತ ಅಧಿಕಾರಿಗಳಾದ ದುಂಡಯ್ಯ ಹಿರೇಮಠ,ಪ್ರಾಚಾರ್ಯರಾದ ಅನುರಾಧ ಆರಾಧ್ಯಮಠ ಹಾಗೂ ಕಾಲೇಜಿನ ಉಪನ್ಯಾಸಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.