ಧಾರವಾಡ 02: ಯಾವುದೇ ಸೌಲಭ್ಯಗಳಿಲ್ಲದ ಸಂದರ್ಭಗಳಲ್ಲಿ ಸ್ಪಧರ್ಾತ್ಮಕ ಪರೀಕ್ಷೆಗೆ ಕಟಿ,್ಟ ಸಾಧನೆ ಮಾಡಿ, ಸಿದ್ಧಿ ಪಡೆದವರುಂಟು. ಇವತ್ತು ಪರೀಕ್ಷೆಗೆ ಬೇಕಾದ ಎಲ್ಲ ಸೌಲಭ್ಯಗಳು ಇವೆ. ವಿದ್ಯಾಥರ್ಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕನರ್ಾಟಕ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಪ್ರಮೋದ ಗಾಯಿ ಹೇಳಿದರು.
ಇಲ್ಲಿಯ ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯು ಪ್ರಾರಂಭಿಸಿದ ಸ್ಪಧರ್ಾತ್ಮಕ ಪರೀಕ್ಷೆಗಳ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, "ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ನಮ್ಮ ರಾಜ್ಯದ ವಿದ್ಯಾಥರ್ಿಗಳು ಉನ್ನತ ಮಟ್ಟದಲ್ಲಿ ಇರುತ್ತಾರೆ. ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಒಂದು ರೀತಿಯ ತಪಸ್ಸು ಎಂದು ಭಾವಿಸಬೇಕು. ಕಠಿಣ ಪರಿಶ್ರಮ ಹಾಗೂ ಆತ್ಮ ವಿಶ್ವಾಸವಿದ್ದಾಗ ಗುರಿ ತಲುಪಲು ಸಾಧ್ಯ. ಚಿನ್ನದಂತಹ ಅವಕಾಶವನ್ನು ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ಒದಗಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜನತಾ ಶಿಕ್ಷಣ ಸಮಿತಿಯ ಕಾರ್ಯದಶರ್ಿ ಡಾ. ನ. ವಜ್ರಕುಮಾರರವರು "ಸ್ಪಧರ್ಾತ್ಮಕ ಪರೀಕ್ಷೆಗೆ ಬೇಕಾದ ಗ್ರಂಥಾಲಯದ ಕೊರತೆಯೊಂದು ನಮ್ಮ ಸಂಸ್ಥೆಯಲ್ಲಿ ಇತ್ತು. ಅದು ಈಗ ಡಾ. ಅಜಿತ ಪ್ರಸಾದರವರ ಪರಿಶ್ರಮದಿಂದ ನೆರವೇರಿದಂತಾಗಿದೆ. ಈ ಗ್ರಂಥಾಲಯದ ಉದ್ಘಾಟನೆಗೆ ಐ.ಎ.ಎಸ್ ಅಧಿಕಾರಿಗಳು ಬರಬೇಕಿತ್ತು, ಅನಿವಾರ್ಯ ಕಾರಣದಿಂದ ಅವರು ಬರದೇ ಇದ್ದದ್ದಕ್ಕಾಗಿ ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್, ಅಧಿಕಾರಿಗಳನ್ನು ಸೃಷ್ಟಿ ಮಾಡಬಲ್ಲ ಸೃಷ್ಟಿಕರ್ತ ಡಾ. ಪ್ರಮೋದ ಗಾಯಿ ಅವರಿಂದ ಉದ್ಘಾಟನೆಗೊಂಡಿರುವುದು ದೈವೇಚ್ಚೆಯಾಗಿದೆ ಎಂದರು.
ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯ ಮೇಲೆ ಡಾ. ಜಿ ಕೃಷ್ಣ ಮೂತರ್ಿ ಉಪಸ್ಥಿತರಿದ್ದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಮಹಾವೀರ ಉಪಾದ್ಯೆ ವಂದಿಸಿದರು. ಲಲಿತ ಕಲಾ ಸಂಘದ ವಿದ್ಯಾಥರ್ಿನಿಯರು ಪ್ರಾಥರ್ಿಸಿದರು.