ನೀಟ್ ಪರೀಕ್ಷೆಯಲ್ಲಿ ಸಾಧನೆ: ವರ್ಷಾಗೆ ಸನ್ಮಾನ
Achievement in NEET Exam: Varsha Felicitated
ಲೋಕದರ್ಶನ ವರದಿ
ಮೂಡಲಗಿ 31: ತಾಲೂಕಿನ ಕುಲಗೋಡ ಗ್ರಾಮದ ರೈತಾಪಿ ಕುಟುಂಬದ ವೀಣಾ ಹಾಗೂ ವೆಂಕಟೇಶ ಯರಗಟ್ಟಿ ದಂಪತಿಗಳ ಜ್ಯೇಷ್ಠ ಸುಪುತ್ರಿ ಕುಮಾರಿ ವರ್ಷಾ ಯರಗಟ್ಟಿ ಸನ್ 2026/27 ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ 635/700 ಅಂಕ ಪಡೆದು ಸಾಧನೆ ಮಾಡಿದ ಪ್ರಯುಕ್ತ ಊರಿನ ಗಣ್ಯರು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಕುಲಗೋಡ ಗ್ರಾಮಸ್ಥರ ವತಿಯಿಂದ ವಿದ್ಯಾರ್ಥಿನಿಯನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಕುಮಾರಿ ವರ್ಷಾಳ ಮುಂದಿನ ಭವಿಷ್ಯ ಉನ್ನತ ಮಟ್ಟಕ್ಕೆ ಏರಿ ಒಳ್ಳೆ ವೈದ್ಯೆಯಾಗಿ ಸಮಾಜದ ಬಡವರ ಸೇವೆ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಮಾಜಿ ಗ್ರಾಪಂ ಅಧ್ಯಕ್ಷ ಬಸನಗೌಡ ಪಾಟೀಲ. ಮಾಜಿ ತಾಪಂ ಸದಸ್ಯರಾದ ಸುಭಾಸ ವಂಟಗೋಡಿ. ಮಾಜಿ ಗ್ರಾಪಂ ಅಧ್ಯಕ್ಷರಾದ ತಮ್ಮಣ್ಣ ದೇವರ. ಕುಲಗೋಡ ಪಿಎಸ್‌ಐ ಆನಂದ ಬಿ, ಪಿಡಿಒ ಸದಾಶಿವ ದೇವರ, ಶಿಕ್ಷಕರಾದ ಲಕ್ಷ್ಮಣ ಬಡಕಲ್, ಹಿರಿಯರಾದ ಬಸವರಾಜ ಯಕ್ಸಂಬಿ, ಸ್ಥಳೀಯ ಸಿಆರ್‌ಪಿ ಸುರೇಶ ತಳವಾರ, ಮಂಜು ಕೊಪ್ಪದ, ಗ್ರಾಪಂ ಕಾರ್ಯದರ್ಶಿ ಜಾರೆ, ಸೋಮನಿಂಗ ಮಿಕಲಿ, ರಾಜು ಕೊಪ್ಪದ, ಸದಾಶಿವ ಬಡಕಲ್ ಸೇರಿದಂತೆ ಅನೇಕರು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 