ಕ್ರೀಡೆಯಲ್ಲಿ ಸಾಧನೆ ಮಾಡಿ, ಗ್ರಾಮದ ಹೆಸರು ತನ್ನಿ: ಸಚೀನ ಪಾಟೀಲ

Achieve excellence in sports and bring fame to the village: Sachin Patil

ನೇಸರಗಿ 17: ಇಂದಿನ ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳಲು ಹಿಂದೇಟ್ಟು ಹಾಕುತ್ತಿದ್ದು, ಹೆಚ್ಚಿನ ಯುವಕರು ಮೊಬೈಲ್ ಅತಿಯಾಗಿ ಅವಲಂಬಿತರಾಗಿ ತಮ್ಮ ಬೆಳವಣಿಗೆಯನ್ನು  ತಾವೇ ಹಾಳು ಮಾಡಿಕೊಳ್ಳುತ್ತಿದ್ದು ಅದಕ್ಕಾಗಿ ಮೊಬೈಲ್ ಹವ್ಯಾಸ ಬಿಟ್ಟು ದೇಶದ ಎಲ್ಲ ಕ್ರೀಡೆಗಳಲ್ಲಿ ಪಾಲ್ಗೊಂಡು ತಮ್ಮ ಅರೋಗ್ಯವನ್ನು ಸದೃಢವಾಗಿ ಬೆಳೆಸಬೇಕೆಂದು ಯುವ ಮುಖಂಡ ಸಚೀನ ಪಾಟೀಲ ಹೇಳಿದರು.    

ಅವರು ಗುರುವಾರದಂದು  ಸಮೀಪದ ಗಜಿಮನಾಳ ಗ್ರಾಮದಲ್ಲಿ ಆಯೋಜಿಸಲಾಗಿದ್ದ  ಹಾಫ್ ಫಿಚ್ ಕ್ರಿಕೆಟ್ ಪಂದ್ಯಾವಳಿ ಲಕ್ಷ್ಮೀದೇವಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.    

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಸುನಂದಾ ಪ್ರಕಾಶ ಉಳವಿ, ಮಾಜಿ ಗ್ರಾ ಪಂ ಅಧ್ಯಕ್ಷ ಪ್ರಕಾಶ ಬಡವಣ್ಣವರ, ಮಂಜುನಾಥ ಯಲಬುರ್ಗಿ, ರಾಮಚಂದ್ರ ತುರಕೋಟಿ, ಕರೆಪ್ಪ ದಂಡಾಪುರ, ಕರೆಪ್ಪ ಹೊಸೂರ, ಲಕ್ಷ್ಮಣ ಮಿಜ್ಜಿ, ಬಾಳೇಶ ದಂಡಾಪುರ, ಮಲ್ಲಪ್ಪ ದಂಡಾಪುರ, ಬಸವಣ್ಣಿ ಚಿಕ್ಕೋಪ್ಪ, ಲಕ್ಷ್ಮಣ ದಂಡಾಪುರ, ಮಾರುತಿ ಕೋಣಿನ, ಲಕ್ಷ್ಮಣ ಮಾರಿಹಾಳ, ಲಗಮೇಶ ಶಿವರಾಯಪ್ಪಗೋಳ, ಬಾಳೇಶ ಮಾಡಮಗೇರಿ, ಲಕ್ಷ್ಮಣ ಮಾಸ್ತಮರ್ಡಿ, ಲಕ್ಷ್ಮಣ ದಂಡಾಪುರ, ಭೀಮಸಿ ಬಸರಿಮರದ, ಸಿದ್ದಪ್ಪ ಮಿಜ್ಜಿ, ಮಲ್ಲಪ್ಪ ಹೊಸೂರ, ದೊಡ್ಡನಿಂಗಪ್ಪ ದಂಡಾಪುರ, ಮಲ್ಲಿಕಾರ್ಜುನ ಕಲ್ಲೋಳಿ, ರಾಯನಗೌಡ ಪಾಟೀಲ ಕ್ರೀಡಾ ಪಟ್ಟುಗಳು,ಕ್ರೀಡಾ ಆಯೋಜಕರು, ಗಜಿಮನಾಳ ಗ್ರಾಮಸ್ಥರು ಉಪಸ್ಥಿತರಿದ್ದರು.