ಎರಡು ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿ ಅರ್ಫಾಜ್ ಅಹ್ಮದ ಹುಸೇನ ಮಿರ್ಜಾನಕರ್ ಅಂದರ್
Accused Arfaz Ahmed Hussain Mirjanakar Andar, who had been absconding for two years
ಎರಡು ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿ ಅರ್ಫಾಜ್ ಅಹ್ಮದ ಹುಸೇನ ಮಿರ್ಜಾನಕರ್ ಅಂದರ್
ಲೋಕದರ್ಶನ ವರದಿ
ಮುಂಡಗೋಡ 13: ಕಳೆದ ಎರಡು ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ರವಿವಾರ ಮುಂಬೈನ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಘಟನೆ ನಡೆದಿದೆ.
ಮುಂಡಗೋಡ ಏಊಃ ಕಾಲೋನಿಯ ನಿವಾಸಿಯಾದ ಅರ್ಫಾಜ್ ಅಹ್ಮದ ಹುಸೇನ ಮಿರ್ಜಾನಕರ್ ಬಂಧಿತ ಆರೋಪಿಯಾಗಿದ್ದಾನೆ.ಈ ಪ್ರಕರಣದಲ್ಲಿ ಆರೋಪಿತನಾದ ಅರ್ಫಾಜ್ ಅಹಮ್ಮದ ಹುಸೇನ್ ಮಿರ್ಜಾನಕರ್ ಈತನು ಕಳೆದ 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದನು. ಆರೋಪಿತನು ಹೊರದೇಶದಲ್ಲಿ ಇರುವುದರಿಂದ ಪತ್ತೆ ಕಾರ್ಯ ಕುರಿತು ಲುಕ್ ಓಟ್ ನೋಟಿಸ್ ಹೊರಡಿಸಲಾಗಿತ್ತು.ರವಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಸದರಿ ವಾರಂಟ್ ಆರೋಪಿ ಅರ್ಫಾಜ್ ಮಿರ್ಜಾನಕರ್ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಮುಂಡಗೋಡ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.ಕೆ.ಎಚ್.ಬಿ. ಕಾಲೋನಿಯ ಇರಮಸಭಾ ಅರ್ಫಾಜ ಮಿರ್ಜಾನಕರ ಅವರು, ತಮ್ಮ ಪತಿಯಾದ ಆರೋಪಿತ ಅರ್ಫಾಜ ಮಿರ್ಜಾನಕರ ಅವರನ್ನು ಕಳೆದ ಫೆಬ್ರವರಿ ತಿಂಗಳಲ್ಲಿ ವಿವಾಹವಾದ ನಂತರ ಸ್ವಲ್ಪ ದಿನ ಚೆನ್ನಾಗಿ ನೋಡಿಕೊಂಡರು.
ನಂತರ ವಿವಾಹದ ಸಮಯದಲ್ಲಿ ತವರು ಮನೆಯಿಂದ ಸರಿಯಾದ ವರದಕ್ಷಿಣೆ ತಂದಿಲ್ಲವೆಂದು ಕಿರುಕುಳ ಕೊಟ್ಟಿದ್ದು, ನಂತರ ಎಲ್ಲರೂ ಸೇರಿಕೊಂಡು ಜಗಳ ಮಾಡುತ್ತಾ ಅವಾಚ್ಯವಾಗಿ ಬೈಯ್ದು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದರು.ಕಳೆದ 8-10 ತಿಂಗಳ ಹಿಂದೆ ತವರು ಮನೆಯವರು ಉಡುಗೊರೆಯಾಗಿ ಕೊಟ್ಟಿದ್ದ 12 ತೊಲೆ ಬಂಗಾರದ ಆಭರಣಗಳನ್ನು ಕಸಿದುಕೊಂಡು ಮನೆಯಿಂದ ಹೊರಗೆ ಹಾಕಿ ವರದಕ್ಷಿಣೆ ತರದೆ ಮನೆಗೆ ಬಂದಲ್ಲಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲ್ಲುವುದಾಗಿ ಹೆದರಿಸಿ ದಿ.17 ಸಾಯಂಕಾಲ 4ಗಂಟೆಗೆ ಗಂಡನ ಮನೆ ಹೋದಾಗ ಐವರು ಆರೋಪಿಗಳು ಸೇರಿ ಮನೆಯೊಳಗೆ ಬಿಡದೆ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆದು, ದರದರನೇ ಎಳೆದು ರಸ್ತೆಯಲ್ಲಿ ದೂಡಿ ಹಾಕಿ ಜೀವ ಬೆದರಿಕೆ ಹಾಕಿದ್ದಾರೆಂದು ಪೊಲೀಸರಿಗೆ ದೂರು ನೀಡಲಾಗಿತ್ತು.
ಎಸ್,ಪಿ, ದೀಪನ್ ಎಂ.ಎನ್, ಅಡಿಷನಲ್ ಎಸ್.ಪಿ. ಕೃಷ್ಣಮೂರ್ತಿ, ಶಿರಸಿ ಡಿ.ಎಸ್.ಪಿ. ಗೀತಾ ಪಾಟೀಲ್, ಮಾರ್ಗದರ್ಶನದಲ್ಲಿ ಕಳೆದ ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿತನನ್ನು ಬಂಧಿಸುವಲ್ಲಿ ಮುಂಡಗೋಡ ಸಿಪಿಐ ರಂಗನಾಥ್ ನೀಲಮ್ಮನವರ್, ಪಿ.ಎಸ್.ಐ. ಯಲ್ಲಾಲಿಂಗ್ ಕುನ್ನೂರ, ಪೊಲೀಸ ಸಿಬ್ಬಂದಿಗಳಾದ ಮಜಪ್ಪ ಚಿಂಚಲಿ, ರಪೈಬಾಷಾ, ಕೆಂಚಪ್ಪಾ ಜಾಲಿಕಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 