ಮುಚಖಂಡಿ ತಾಂಡ ಬಳಿಯ ಹೆದ್ದಾರಿಯಲ್ಲಿ ಅಪಘಾತ : ಒಂದು ಸಾವು

ಬಾಗಲಕೋಟೆ11:  ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡ  ಬಳಿಯ  ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಗದ್ದನಕೇರಿ ಎಲ್ ಟಿ  ಗ್ರಾಮದ  ಜಮನಪ್ಪ ಟೀಕಪ್ಪ ಪವಾರ್  ಅಪಘಾತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಸ್ಥಳಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿಗಳಾದ  ಗೋವಿಂದ ಎಂ ಕಾರಜೋಳ ಅವರು ಮೃತರ  ಕುಟುಂಬಕ್ಕೆ ಸಾಂತ್ವಾನ ಹೇಳಿ, ಸಬ್ ಇನ್ ಪೆಕ್ಟರ್ ಅವರಿಗೆ ಪ್ರಕರಣ ಕುರಿತು  ಸೂಕ್ತ ತನಿಖೆ ಮಾಡಿ, ಮೃತರ ಕುಟುಂಬದವರಿಗೆ  ಅಪಘಾತ  ವಿಮೆಯನ್ನು ತ್ವರಿತವಾಗಿ ನೀಡಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.