ಕೊಪ್ಪಳ : ಮಾಧ್ಯಮ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಮಾಡಿದ ಹಾಗೂ ಗಣನೀಯ ಸೇವೆ ಸಲ್ಲಿಸಿದ 51 ಜನ ಪತ್ರಕರ್ತರಿಗೆ 2018ನೇ ಸಾಲಿನ ಕನರ್ಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಂದಿದೆ.
ಅಕಾಡೆಮಿ ಅಧ್ಯಕ್ಷ ಎಮ್. ಸಿದ್ದರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಶಸ್ತಿ ಪಟ್ಟಿಗೆ ಅನುಮೋದನೆ ನೀಡಲಾಯಿತು. ಬಾಗಲಕೋಟೆ ಹಾಗೂ ಕೊಪ್ಪಳ ಆವೃತ್ತಿಯ ಸಂಪಾದಕರಾದ ಸುಭಾಸ ಹೊದ್ಲೂರು ಅವರು ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆಯುವ ಮೂಲಕ ಸುದಿನ ಪತ್ರಿಕೆಗೆ ಮತ್ತೊಂದು ಗರಿಮೆಯನ್ನು ಮುಡಿಗೇರಿಸಿಕೊಳ್ಳುವ ಸಾಧನೆ ಮಾಡಿದ್ದಾರೆ. ಹೊದ್ಲೂರ ಅವರು ಸುಮಾರು ಮೂರು ದಶಕದಿಂದ ಪತ್ರಿಕಾ ಲೋಕದಲ್ಲಿ ತಮ್ಮದೇ ಆದ ಆದ ಛಾಪು ಮೂಡಿಸಿದ್ದಾರೆ.
2018 ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸುದಿನ ದಿನಪತ್ರಿಕೆ ಸಂಪಾದಕರಿಗೆ ಒಲಿದು ಬಂದಿರುವುದು ಅವರ ಹಿತೈಗಳು ಹಾಗೂ ಓದುಗರಿಗೆ ಸಂತೋಷವನ್ನುಂಟು ಮಾಡಿದೆ. ಅಲ್ಲದೆ ಅವರು ಬಾಗಲಕೋಟೆ ಜಿಲ್ಲಾಡಳಿತದಿಂದ ನೀಡುವ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮಟ್ಟದ ಕದಂಬ ಪ್ರಶಸ್ತಿ, ಲಯನ್ಸ್ ಕ್ಲಬ್ ನೀಡುವ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ನೀಡುವ ಹಲವಾರು ಪ್ರಶಸ್ತಿಗೆ ಸುಭಾಷ್ ಹೊದ್ಲೂರ ಭಾಜನರಾಗಿದ್ದಾರೆ.
ಅಭಿನಂದನೆ: ಸುಭಾಷ್ ಹೊದ್ಲೂರ ಅವರಿಗೆ ಅಕಾಡೆಮಿ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಕೊಪ್ಪಳ ಸುದಿನ ಪತ್ರಿಕೆಯ ಸ್ಥಾನಿಕ ಸಂಪಾದಕ ಹರೀಶ್ ಎಚ್.ಎಸ್., ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಸಾದಿಕ್ ಅಲಿ, ಮಾಜಿ ಅಧ್ಯಕ್ಷ ದೇವು ನಾಗನೂರ, ಪ್ರದಾನ ಕಾರ್ಯದಶರ್ಿ ಎನ್.ಎಂ.ದೊಡ್ಡಮನಿ, ಪತ್ರಕರ್ತರಾದ ಜಿ.ಎಸ್.ಗೋನಾಳ, ಕುಬೇರ ಮಜ್ಜಿಗಿ, ಸಿದ್ದಪ್ಪ ಹಂಚಿನಾಳ, ಶಿವರಾಜ ನುಗಡೋಣಿ, ಫಕೀರಪ್ಪ ಗೋಟೂರ ಹಾಗೂ ಕೊಪ್ಪಳ ಆವೃತ್ತಿಯ ಸುದಿನ ಪತ್ರಿಕೆಯ ಸಿಬ್ಬಂದಿ ಸೇರಿದಂತೆ ಇತರರು ಅಭಿನಂದನೆ ಸಲ್ಲಿಸಿದ್ದಾರೆ.