ರಾಷ್ಟ್ರೀಯ ಭಾವ್ಯಕ್ಯತೆ ಸಪ್ತಾಹ ಕಾರ್ಯಕ್ರಮಕ್ಕೆ ಅಬ್ಬುಲಿಗೆಪ್ಪ ಚಾಲನೆ

ಕೊಪ್ಪಳ: ಭಾರತ ಸರ್ಕಾರದ ವಾರ್ತಾ  ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ ಬಳ್ಳಾರಿ ವತಿಯಿಂದ ಕೊಪ್ಪಳ ತಾಲ್ಲೂಕಿನ ಹೊಸ ಬಂಡಿಹರ್ಲಾ ಪುರ ಗ್ರಾಮದಲ್ಲಿ ಇಂದು (ನ.20) ಆಯೋಜಿಸಲಾಗಿದ್ದ ರಾಷ್ಟ್ರೀಯ ಭಾವ್ಯಕ್ಯತೆ ಸಪ್ತಾಹ ಕಾರ್ಯಕ್ರಮ''ಕ್ಕೆ ಕೊಪ್ಪಳ ತಾಲ್ಲೂಕ ಪಂಚಾಯತ್ ಸದಸ್ಯ ಅಬ್ಬುಲಿಗೆಪ್ಪ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.   

ರಾಷ್ಟ್ರೀಯ ಭಾವೈಕೆತೆ ಸಪ್ತಾಹ ಕಾರ್ಯಕ್ರಮವನ್ನು ಭಾರತ ಸರ್ಕಾರದ ವಾರ್ತಾ  ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನ ಸಂಪರ್ಕ ಕಾಯರ್ಾಲಯ ಬಳ್ಳಾರಿ, ಕೊಪ್ಪಳ ಜಿಲ್ಲಾ ಪಂಚಾಯಿತಿ, ಜಿಲ್ಲಾ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಶಿಶು ಅಭಿವೃದ್ಧಿ ಯೋಜನೆ, ಹೊಸಬಂಡಿಹರ್ಲಾಪುರ ಗ್ರಾಮ ಪಂಚಾಯಿತಿ, ಸ.ಪ.ಪೂ.ಕಾಲೇಜು ಹಾಗೂ ಪ್ರೌಢ ಶಾಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹೊಸಬಂಡಿ ಹರ್ಲಾಪುರ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.   

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾ.ಪಂ. ಸದಸ್ಯ ಅಬ್ಬುಲಿಗೆಪ್ಪ ಮಾತನಾಡಿ, ದೇಶದಲ್ಲಿ ವಾಸಿಸುವ ಎಲ್ಲ ಜನರು ಒಂದೇ ರಾಷ್ಟ್ರಟದ ಮಕ್ಕಳು ಎಂಬ  ಭಾವನೆಯಿಂದ ಒಗ್ಗಟ್ಟಾಗಿ ಏಕತೆಯಿಂದ  ಸಹಭಾಳ್ವೆ ಮತ್ತು ರಾಷ್ಟ್ರೀಯ ಭಾವೈಕೆತೆ ಬೆಳೆಸಿಕೊಳ್ಳಬೆಕೆಂದು ಎಂದರು.   

ಕಾಲೇಜಿನ ಉಪನ್ಯಾಸಕ ಗುರುಬಸವರಾಜ ಮಾತನಾಡಿ, ಭಾರತದಂತಹ ಬಹುಭಾಷ, ಬಹು ಸಂಸ್ಕೃತಿ ಹಾಗೂ ವಿವಿಧ ಜಾತಿ, ಧರ್ಮ ಹೊಂದಿದ ದೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆದಲ್ಲಿ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. 

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ ತಿಪ್ಪಣ್ಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  ಉಪಾಧ್ಯಕ್ಷ ಅಬ್ದುಲ್ ನಜೀರಸಾಬ, ಸದಸ್ಯರಾದ ಚನ್ನಕೃಷ್ಣ, ಸಿದ್ದಮ್ಮ, ಮಂಜುಳಾ, ಎಸ್.ಡಿಎಮ್.ಸಿ ಸದಸ್ಯರಾದ ಸೋಮಪ್ಪ, ನಾಗರಾಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಡಾ. ಮಾದೇವಿ, ಕಾಲೇಜಿನ ಉಪ್ಯಾಸಕರಾದ ಶರಣಪ್ಪ ಎಚ್.ಬಿ. ಪ್ರೌಢ ಶಾಲಾ ಹಿರಿಯ ಶಿಕ್ಷಕಿ ಸುಮಂಗಲಾ ಶಾಸ್ತ್ರಿ, ಶಿಕ್ಷಣ ಪೇಮಿ ಕಾಶಯ್ಯಸ್ವಾಮಿ ಸೇರಿದಂತೆ ಮತ್ತಿತರರು ಇದೇ ಉಪಸ್ಥಿರಿದ್ದರು.  

ಕ್ಷೇತ್ರ ಜನ ಸಂಪರ್ಕ ಕಾಯರ್ಾಲಯದ ಉಪ ನಿರ್ದೇಶಕ ಡಾ. ಜಿ.ಡಿ. ಹಳ್ಳಿಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಪ್ರಚಾರ ಸಹಾಯಕ ಎನ್. ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.   

ಜಾಥಾ ಹಾಗೂ ಬಹುಮಾನ ವಿತರಣೆ: ಕಾರ್ಯಕ್ರಮದ ಅಂಗವಾಗಿ ಹೊಸಬಂಡಿಹರ್ಲಾಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಗೀತ ಮತ್ತು ನಾಟಕ ವಿಭಾಗದ ಕಲಾ ತಂಡದವರೊಂದಿಗೆ ಜಾಗೃತಿ ಗೀತೆಗಳ ಮೂಲಕ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ವಿದ್ಯಾರ್ಥಿಗಳಿಗಾಗಿ ಕ್ರೀಡಾ ಸ್ಪಧೆರ್ೆ, ಚಿತ್ರಕಲೆ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.