ಲೋಕದರ್ಶನ
ವರದಿ
ಕಾರವಾರ 17:
ಕಾರವಾರದ ಲಯನ್ಸ ಕ್ಲಬ್ ಮಾಜಿ ಅಧ್ಯಕ್ಷ ಹಾಗೂ
ಸಮಾಜ ಸೇವಕ ಅಲ್ತಾಫ್ ಶೇಖ್
ಅವರಿಗೆ ನವ ದೆಹಲಿಯ ಸಿಟಿಜನ್
ಇಂಟಿಗ್ರಿಟಿ ಪೀಸ್ ಇನ್ಸಟ್ಯೂಟ್ನವರು ಈಚೆಗೆ
ಡಾ.ಅಬ್ದುಲ್ ಕಲಾಂ ಸೇವಾ ಪ್ರಶಸ್ತಿ
ನೀಡಿ ಗೌರವಿಸಿದ್ದಾರೆ. ರಾಜ್ಯದ ನಾಲ್ವರಿಗೆ ಹಾಗೂ ವಿವಿಧ ರಾಜ್ಯಗಳ
ಸಮಾಜ ಸೇವಕರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಸಮಾಜದಲ್ಲಿ ಶಾಂತಿ ಸೌಹಾರ್ದತೆಗಾಗಿ ಶ್ರಮಿಸುವ ಉದ್ಯಮಿಗಳಿಗೆ ಈ ಪ್ರಶಸ್ತಿಯನ್ನು ಪ್ರತಿವರ್ಷ
ನೀಡಲಾಗುತ್ತಿದೆ.
ಈಚೆಗೆ ದೆಹಲಿಯ ಇಂಡಿಯನ್ ಇಂಟರ್ ನ್ಯಾಶನಲ್ ಸೆಂಟರ್ನಲ್ಲಿ ಅಬ್ದುಲ್ ಕಲಾಂ ಅವರ 87 ನೇ
ಜನ್ಮದಿನದ ನಿಮಿತ್ತ ನಡೆದ
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ
ಮಾಡಲಾಯಿತು. ಈ ಸಮಾರಂಭದಲ್ಲಿ ಛತ್ತಿಸಗಡದ
ಮಾಜಿ ರಾಜ್ಯಪಾಲ ಕೆ.ಎಂ.ಸೇಥ್,
ಸಿಕ್ಕಿಮ್ ಮಾಜಿ ರಾಜ್ಯಪಾಲ ಬಿ.ಪಿ.ಸಿಂಗ್, ವಿದೇಶಾಂಗ
ಸಚಿವಾಲಯದ ಅಂಬ್ಯಾಸಡರ್ ಕೆ.ವಿ.ರಾಜನ್.
ಕಾಂಗ್ರೆಸ್ ವಕರ್ಿಂಗ್ ಕಮಿಟಿ ನಿವೃತ್ತ ಕಾರ್ಯದಶರ್ಿ ವೇದಪ್ರಕಾಶ್ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಗಣ್ಯರಿಂದ ಪ್ರಶಸ್ತಿಯನ್ನು ಅಲ್ತಾಫ್ ಶೇಖ್ ಸ್ವೀಕರಿಸಿದರು.