ಬ್ಯಾಡಗಿ: ಆಧಾರ್ ನೋಂದಣಿಗಾಗಿ ಸರತಿಯಲ್ಲಿ ನಿಲ್ಲುವ ಶಿಕ್ಷೆಯಿಂದ ತಾಲೂಕಿನ ಜನತೆಗೆ ಮುಕ್ತಿ ಸಿಗುವ ಲಕ್ಷಣಗಳಿಲ್ಲ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಂಡಿದ್ದ ಪಟ್ಟಣದ ಅಂಚೆ ಕಛೇರಿ ಬಳಿ ಭಾನುವಾರ ನೂಕು ನುಗ್ಗಲು ಏರ್ಪಟ್ಟಿತ್ತು, ಇಂದಿನ ಘಟನೆಗೆ ಹಾವೇರಿ ಜಿಲ್ಲಾ ಪಂಚಾಯತ್ ಕಾರ್ಯನಿವರ್ಾಹಕಾಧಿಕಾರಿ (ಸಿಎಸ್) ಅವರ ಮೌಖಿಕ ಅದೇಶ ಕೂಡ ಶಿಕ್ಷಕರು ಪಾಲಕರು ಮತ್ತು ಮಕ್ಕಳನ್ನು ಪೇಚಿಗೆ ಬೀಳಿಸಲು ಕಾರಣವೆನ್ನಲಾಗುತ್ತಿದೆ.
ಕಳೆದ ಸಾಲಿನ ಎಸ್ಎಸ್ಪಿ ಯೋಜನೆಯಡಿ ಶಿಶ್ಯವೇತನಕ್ಕಾಗಿ (ಸ್ಕಾಲರ್ಶಿಪ್) ಅಜರ್ಿ ಸಲ್ಲಿಸಿದ್ದ ಮಕ್ಕಳು ಅಧಾರ ಹೊಂದಾಣಿಕೆ (ಲಿಂಕ್) ಯಾಗದೇ ಹಾಗೆಯೇ ಉಳಿದಿವೆ, ಆದರೆ ಸದರಿ ಯೋಜನೆಯಡಿ ಶಿಷ್ಯವೇತನ ವಂಚಿತ ಮಕ್ಕಳ ಇನ್ನೆರಡು ದಿನಗಳಲ್ಲಿ ಆಧಾರ ನೋಂದಣಿ ಸರಿಪಡಿಸಿಕೊಂಡು ಹಣವನ್ನು ಅವರ ಖಾತೆಗೆ ಮರಳಿಸುವಂತೆ ಸಭೆಯೊಂದರಲ್ಲಿ ಮೌಖಿಕ ಸೂಚನೆ ನೀಡಿದ್ದರು ಎನ್ನಲಾಗಿದೆ.
ಪೇಚಿಗೆ ಬಿದ್ದ ಶಿಕ್ಷಣ ಇಲಾಖೆ: ಹಾವೇರಿ ಜಿಲ್ಲಾ ಪಂಚಾಯತ್ ಕಾರ್ಯನಿವರ್ಾಹಕಾಧಿಕಾರಿ ಆದೇಶದಿಂದ ಪೇಚಿಗೆ ಬಿದ್ದ ಶಿಕ್ಷಣ ಇಲಾಖೆಯು ತಾಲೂಕಿನ ಎಲ್ಲ ಮುಖ್ಯ ಶಿಕ್ಷಕರಿಗೆ ಆಧಾರ ಲಿಂಕ್ ಮಾಡಿಸುವುದೂ ಸೇರಿದಂತೆ 10 ವರ್ಷದೊಳಗಿನ ಮತ್ತು ಅದಕ್ಕೂ ಮೆಲ್ಪಟ್ಟ ಮಕ್ಕಳಿಗೆ ಸ್ಥಳೀಯ ಅಂಚೆ ಕಛೇರಿಯಲ್ಲಿ ಜೂ.30 ಭಾನುವಾರು ವಿಶೇಷ ನೋಂದಣಿ ಅಭಿಯಾನ ಆಯೋಜನೆ ಮಾಡಿತ್ತು.
ಮಳೆಯಲ್ಲಿ ತೋಯ್ದು ತೊಪ್ಪಡಿಯಾದ ಮಕ್ಕಳು: ಎರಡು ದಿನಗಳಲ್ಲಿ ಆಧಾರ ಲಿಂಕ್ ಮಾಡಿಸುವ ಸುದ್ದಿ ಶಿಕ್ಷಕರು ಮತ್ತು ಪಾಲಕರಿಗೆ ಕಿವಿಗೆ ಬೀಳುತ್ತಿದ್ದಂತೆ ಬೆಳಗಿನ ಜಾವದಿಂದಲೇ ಸ್ಥಳೀಯ ಅಂಚೆ ಕಛೇರಿ ಏದುರು ಜಮಾಯಿಸಿದರು, ಆದರೆ ಭಾನುವಾರಿ ಬೆಳಿಗ್ಗೆಯಿಂದಲೇ ಸಣ್ಣಗೆ ಮಳೆ ಬರಲಾರಂಭಿಸಿತ್ತು.
ಆದರೆ ಅದನ್ನೂ ಲೆಕ್ಕಿಸದೇ ಆಧಾರ್ ಲಿಂಕ್ ಮಾಡಿಸಲು ಮತ್ತು ಹೊಸ ಬ್ಯಾಂಕ್ ಖಾತೆ ತೆರೆಯಲು ಮಕ್ಕಳೊಂದಿಗೆ ಆಗಮಿಸಿದ್ದ ಪಾಲಕರು ಮಾತ್ರ ಅಂಚೆ ಕಛೇರಿ ಆವರಣ ಬಿಟ್ಟು ಕದಲಲಿಲ್ಲ.
ಕೈಕೊಟ್ಟ ಸರ್ವರ್ ಮಕ್ಕಳೊಂದಿಗೆ ಮನೆಗೆ ತೆರಳಿದ ಪಾಲಕರು: ಇವೆಲ್ಲದರ ಮದ್ಯೆ ಅಂಚೆ ಕಚೇರಿಯಲ್ಲಿ ಸರ್ವರ್ ಕೈಕೊಟ್ಟ ಹಿನ್ನೆಲೆಯಲ್ಲಿ ಪಾಲಕರು ಮತ್ತು ಮಕ್ಕಳನ್ನು ಕೆಲಕಾಲ ಸಂಕಷ್ಟಕ್ಕೀಡು ಮಾಡಿತು, ಸರ್ವರ್ ನಡೆಸಿದ ಕಣ್ಣಾಮುಚ್ಚಾಲೆ ಆಟದಿಂದ ಬೇಸರಗೊಂಡ ಕೆಲ ಪಾಲಕರು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮನದಲ್ಲಿ ಅಂದುಕೊಂಡು ಮಕ್ಕಳೊಂದಿಗೆ ಮನೆಗೆ ತೆರಳಿದ ಘಟನೆಯೂ ನಡೆಯಿತು..
ಕಣ್ತೆಗೆಯದ ತಾಲೂಕಾಡಳಿತ ಬ್ಯಾಡಗಿ ಜನರ ದುದರ್ೈವ: ಭಾರತದ ಪ್ರತಿಯೊಬ್ಬ ಪ್ರಜೆಯೂ ಸಕರ್ಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್ ನೋಂದಣಿ ಕಡ್ಡಾಯ ಮಾಡಿರುವ ಕ್ರಮ ಸ್ವಾಗತಾರ್ಹ, ಹೊಸದಾಗಿ ನೋಂದಣಿ ಸೇರಿದಂತೆ ಹೆಸರು, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ ಇನ್ನಿತರ ತಿದ್ದುಪಡಿಗಳಿಗಾಗಿ ಜನರು ಆಧಾರ್ ಮಾಡಿಸಬೇಕಾಗಿದ್ದು ಅನಿವಾರ್ಯ, ಆದರೆ ತಾಲೂಕಿನ ವಿದ್ಯಾಥರ್ಿಗಳು ಹಾಗೂ ಜನರು ಅನುಭವಿಸುತ್ತಿರುವ ಗೋಳಂತೂ ಜಿಲ್ಲಾಡಳಿತ ಕೇಳುವ ಸ್ಥಿತಿಯಲ್ಲಿಲ್ಲ, ಆಧಾರ್ಗಾಗಿ ಜನರು ಪರದಾಡುವಂತಹ ಸ್ಥಿತಿ ಕಂಡೂ ಕಂಡರಿಯದಂತೆ ತಾಲೂಕಾಡಳಿತ ವತರ್ಿಸುತ್ತಿರುವುದು ಬ್ಯಾಡಗಿ ಜನತೆಯ ದುದರ್ೈವವೇ ಸರಿ..