ನವದೆಹಲಿ, ಮಾರ್ಚ್ 6, ಭ್ರಷ್ಟಾಚಾರ ಮತ್ತು ಅಕ್ರಮ ನಿರ್ಮಾಣದ ವಿರುದ್ಧ ಧ್ವನಿ ಎತ್ತಿದ ರಾಜ್ಯಸಭಾ ಸಂಸದ ರೇವಂತ್ ರೆಡ್ಡಿ ಅವರನ್ನು ತೆಲಂಗಾಣ ಸರ್ಕಾರ ಬಂಧಿಸಿರುವ ಕ್ರಮವನ್ನು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಖಂಡಿಸಿ, ರೆಡ್ಡಿ ಬಿಡುಗಡೆಗೆ ಒತ್ತಾಯಿಸಿದ್ದಾರೆ.ಈ ವಿಷಯದಲ್ಲಿ ತೆಲಂಗಾಣ ಸರ್ಕಾರದ ಹಸ್ತಕ್ಷೇಪ ತೀವ್ರ ಖಂಡನೀಯ ಎಂದು ಗುಲಾಂ ನಬೀ ಆಜಾದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ರಾಜ್ಯ ಸರ್ಕಾರದ ಕ್ರಮವನ್ನು ಬಲವಾಗಿ ಖಂಡಿಸುತ್ತೇನೆ. ರೇವಂತ್ ರೆಡ್ಡಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಕಾನೂನುಬಾಹಿರ ಚಟುವಟಿಕೆ ಮತ್ತು ಕೃತ್ಯಗಳಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಸರ್ಕಾರ ಕೂಡಲೇ ಬಂಧಿಸಬೇಕು.’ ಎಂದು ಗುಲಾಂ ನಬೀ ಆಜಾದ್ ಒತ್ತಾಯಿಸಿದ್ದಾರೆ. ಕಾನೂನು ಬಾಹಿರ ನಿರ್ಮಾಣದಲ್ಲಿ ತೊಡಗಿರುವವರು ಮತ್ತು ಸರ್ಕಾರದ ನಡುವಿನ ಒಳ ಒಪ್ಪಂದವನ್ನು ರೆಡ್ಡಿ ಬಂಧನ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.