ನವದೆಹಲಿ: ಮುಂದಿನ ವರ್ಷದಿಂದ ಯಾವುದೇ ಪಟ್ಟಣದಲ್ಲಿ ರಾತ್ರಿ 9 ಗಂಟೆ ಬಳಿಕ ಎಟಿಎಂಗಳಿಗೆ ನಗದು ತುಂಬಿಸುವಂತಿಲ್ಲ. ಗ್ರಾಮಿಣ ಪ್ರದೇಶಗಳಲ್ಲಿ ಸಂಜೆ 6 ಗಂಟೆಯ ಬಳಿಕ ನಗದು ಮರುಪೂರಣ ಮಾಡುವಂತಿಲ್ಲ! ಕೇಂದ್ರ ಗೃಹ ಸಚಿವಾಲಯ ಈ ಕುರಿತು ಆದೇಶ ಹೊರಡಿಸಿದ್ದು, ಮುಂದಿನ ವರ್ಷ ಫೆಬ್ರವರಿ 8ರಿಂದ ಇದು ಜಾರಿಗೆ ಬರಲಿದೆ.
ದೇಶದ ವಿವಿಧೆಡೆ ನಗದು ಸಾಗಿಸುವ ವಾಹನಗಳ ಮೆಲೆ ದಾಳಿ, ದರೊಡೆ, ಎಟಿಎಂಗೆ ಕನ್ನ ಮತ್ತಿತರ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆ ಯಲ್ಲಿ ಕೇಂದ್ರ ಸಕರ್ಾರ ಈ ಕ್ರಮಕ್ಕೆ ಮುಂದಾಗಿದೆ.
ಎಟಿಎಂ ವಾಹನಗಳಲ್ಲಿ ಹಣ ಸಾಗಿಸುವ ವೇಳೆ ಡ್ರೆವರ್ ಹೊರತಾಗಿ ಇಬ್ಬರು ಗಾಡ್ರ್ಗಳು, ಇಬ್ಬರು ಎಟಿಎಂ ಅಧಿಕಾರಿಗಳು ಇರಬೇಕು. ಒಬ್ಬ ಸಶಸ್ತ್ರ ಗಾಡರ್್ ಡ್ರೆವರ್ ಪಕ್ಕದಲ್ಲಿ ಕುಳಿತಿಬೇಕು. ಇನ್ನೊಬ್ಬ ಗಾಡರ್್ ಹಿಂದಿನ ಸೀಟಿನಲ್ಲಿ ಕುಳಿತಿರಬೇಕು.
ವಾಹನಕ್ಕೆ ನಗದನ್ನು ತುಂಬಿಸುವಾಗ ಅಥವಾ ತೆಗೆಯುವಾಗ, ಚಹಾ, ಊಟದ ಸಮಯದಲ್ಲಿ ಕನಿಷ್ಠ ಒಬ್ಬ ಗಾಡರ್್ ನಗದು ತುಂಬಿರುವ ವಾಹನದ ಬಳಿಯೆ ಇರಬೇಕು. ಮಾಜಿ ಸೈನಿಕರು, ಸೇನೆಯಲ್ಲಿ ಗಾಡ್ರ್ಗಳಾಗಿದ್ದವರಿಗೆ ಆದ್ಯತೆ ನೀಡಬೇಕು. ಟಿಪಿಎಸ್, ಸಿಸಿಟಿವಿ ಕ್ಯಾಮರಾ ಮತ್ತಿತರ ಉಪಕರಣಗಳ ಮೂಲಕ ನಿಗಾ ಇರಿಸಬೇಕು. ಯಾವುದೇ ವಾಹನದಲ್ಲಿ 5 ಕೊ?ಟಿಗಿಂತ ಹೆಚ್ಚಿನ ಹಣ ಸಾಗಿಸಬಾರದು.
ಖಾಸಗಿ ಏಜೆನ್ಸಿಗಳು ಭದ್ರತಾ ಸಿಬ್ಬಂದಿಯನ್ನು ನೇಮಿಸುವಾಗ ವ್ಯಕ್ತಿಯ ಹಿನ್ನೆಲೆ ಕುರಿತು ಪೊಲೀಸ್ ಪರಿಶೀಲನೆ ನಡೆಸಬೇಕು. ಆಧಾರ್ ಸಂಖ್ಯೆ, ಕಾಯಂ ವಿಳಾಸ, ಈ ಹಿಂದೆ ಆತ ಎಲ್ಲಿ ಕೆಲಸ ಮಾಡಿದ್ದ, ಆತನ ವಿರುದ್ಧ ದೂರು, ಪ್ರಕರಣ ಇದೆಯೆ ಎಂಬುದನ್ನು ಪರಿಶೀಲಿಸುವುದು ಕಡ್ಡಾಯ.