ಗುಳೇದಗುಡ್ಡ: ಪಟ್ಟಣದಲ್ಲಿ ಕಳೆದ ಕೆಲ ದಿನಗಳಿಂದ ಎಟಿಎಂಗಳು ನಿಸ್ಕ್ರೀಯವಾದ ಹಿನ್ನೆಲೆಯಲ್ಲಿ ಜನರು ಹಣ ತೆಗೆಸಲು ಪರದಾಡುತ್ತಿದ್ದಾರೆ.
ದೇಶ ಲಾಕ್ಡೌನ್ ಆಗಿ 9 ದಿನಗಳೇ ಕಳೆದಿವೆ. ಬೇರೆ ಸ್ಥಳಗಳಲ್ಲಿ ದುಡಿಯುವ ಕಾಮರ್ಿಕರು ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ನೌಕರಿ ಮಾಡಿಕೊಂಡಿದ್ದವರು ಕೋರೊನಾ ಭೀತಿಯಿಂದ ಬಂದು ಮನೆ ಸೇರಿ 15 ದಿನಗಳೇ ಕಳೆದಿವೆ. ಕೈಯಲ್ಲಿ ಕಾಸಿಲ್ಲ. ಎಟಿಎಂ ದಿಂದ ಹಣ ತೆಗೆಯಬೇಕೆಂದರೆ ಪಟ್ಟಣದಲ್ಲಿ ಸುಮಾರು 5 ಬ್ಯಾಂಕುಗಳ ಎಟಿಎಂಗಳಿವೆಯಾದರೂ ಅವು ಕಳೆದ ಕೆಲ ದಿನಗಳಿಂದ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಹಣಕ್ಕಾಗಿ ದಿನಕ್ಕೆ ಹತ್ತಾರು ಬಾರಿ ಪಟ್ಟಣದಲ್ಲಿರುವ ಎಟುಎಂಗಳಿಗೆ ಭಯದಲ್ಲಿಯೇ ಪರದಾಡುವ ಸ್ಥಿತಿ ಬಂದಿದೆ.
ಲಾಕ್ಡೌನ್ ಹಿನ್ನೆಯಿಂದ ಮನೆಯ ಹೊರಗೆ ಬಾರದ ಜನರು ದಿನಕ್ಕೆ ಒಂದು ಸಲವಾದರೂ ಹಣ ತೆಗೆಸುವ ಅಗತ್ಯಕ್ಕೆ ಮನೆ ಹೊರಗಡೆ ಬಂದು ಎಟಿಎಂ ಗೆ ಹೋಗಿ ಹಣ ಪಡೆಯದೇ ನಿರಾಶರಾಗಿ ಬರಳುವಂತಾಗಿದೆ. ಇನ್ನು ತಾಲೂಕಿನ ಗ್ರಾಮೀಣ ಪ್ರದೇಶದ ಜನರು ಸಹ ಗುಳೇದಗುಡ್ಡಕ್ಕೆ ಬಂದು ಎಟಿಎಂ ನೋಡಿ ನಿರಾಶರಾಗಿ ಹೋಗುತ್ತಿದ್ದಾರೆ. ಕೈಯಲ್ಲಿ ಕಾಸಿಲ್ಲದೇ ಮೋಬೈಲ್ ಬ್ಯಾಂಕಿಂಗ್ಗೊತ್ತಿರದ ಹಾಗೂ ಆ ವ್ಯವಸ್ಥೆ ಇಲ್ಲದ, ಮನಿಟ್ರಾನ್ಸಪರ್ ಬರದ ಗ್ರಾಹಕರ ಸ್ಥಿತಿ ದೇವರೇ ಬಲ್ಲ. ಈ ಗೋಳಾಟ ಕಳೆದ 15 ದಿನಗಳಿಂದ ಕಂಡು ಬರುತ್ತಿದೆ. ಕೈಯಲ್ಲಿ ಕಾಸಿಲ್ಲದೇ ಕಂಗಾಲಾಗಿದ್ದೇವೆಂದು ಜನ ಹೇಳುವಂತಾಗಿದೆ. ಬ್ಯಾಂಕುಗಳು ಲಾಕ್ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳಲ್ಲಿ ಒಂದಾಗಿರುವ ಎಟಿಎಂಗಳಿಗೆ ಹಣ ಹಾಕದೇ ಕೈಚಲ್ಲಿ ಕುಳಿತಿವೆ. ಕೇಳಿದರೆ ದುರಸ್ತಿಯಲ್ಲಿವೆ ಎನ್ನುತ್ತಾರೆ. ಕೈಯಲ್ಲಿ ದುಡ್ಡಿಲ್ಲದ ಇಂತಹ ಸಂಧಿಗ್ದ ಪರಿಸ್ಥಿಯಲ್ಲಿ ಬ್ಯಾಂಕುಗಳು ತಮ್ಮ ಕರ್ತವ್ಯ ಮಾಡುತ್ತಿಲ್ಲವೆಂದು ಸಾರ್ವನಿಕರು ಅರೋಪಿಸುತ್ತಿದ್ದಾರೆ.
ಇನ್ನೂ 12 ದಿನ ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ಸಾರ್ವಜನಿಕರಿಗೆ ಆಗುತ್ತಿರುವ ಹಣಕಾಸಿನ ತೊಂದರೆಗೆ ಅನುಕೂಲ ಒದಗಿಸಬೇಕು. ಉಳಿದೆಲ್ಲ ದಿನಗಳಲ್ಲಿ ದುರಸ್ತಿ ಎಂದು ಹೇಳುವಂತೆ ಈಗಲೂ ಹೇಳದೇ ಅವುಗಳು ಸಾರ್ವಜನಕರಿಗೆ ಅನುಕೂಲವಾಗುವಂತೆ ಬ್ಯಾಂಕ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ಇಲ್ಲವೇ ಜಿಲ್ಲಾಧಿಕಾರಿಗಳು ಎಟಿಎಂಗಳು ನಿತ್ಯ ಕಾರ್ಯ ನಿರ್ವಹಿಸುವಂತೆ ಕ್ರಮಕ್ಕೆ ಮುಂದಾಗಬೇಕೆಂದು ಇಲ್ಲಿನ ಸಾರ್ವಜನಿಕರು ಹಾಗೂ ವಿವಿಧ ತಾಲೂಕಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.