ಮುಂಬೈ, ಫೆ 15 : ಬಾಲಿವುಡ್ ನಟ ಅರ್ಸ್ಲಾನ್ ಗೋನಿ, ಅವರು ಎರಡು ವೆಬ್ ಸಿರೀಸ್ ನಲ್ಲಿ ನಟಿಸಲು ಸಜ್ಜಾಗಿದ್ದಾರೆ.ಕಳೆದ 2017ರಲ್ಲಿ ತೆರೆಕಂಡ ಜಿಯಾ ಔರ್ ಜಿಯಾ ಚಿತ್ರದ ಮೂಲಕ ಅರ್ಸ್ಲಾನ್ ಗೋನಿ ಬಿ ಟೌನ್ ಗೆ ಪಾದಾರ್ಪಣೆ ಮಾಡಿದ್ದರು. ಆಲ್ಟ್ ಬಾಲಾಕಿ ಅವರ ವೆಬ್ ಸಿರೀಸ್, ಮೈ ಹೀರೋ ಬೋಲ್ ರಹಾ ಹು ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು 1980-90ರ ದಶಕದ ಮಧ್ಯದಲ್ಲಿನ ಕಥಾ ಹಂದರಹೊಂದಿದೆ. ಈ ವೆಬ್ ಸಿರೀಸ್ ನಲ್ಲಿ ಅರ್ಸ್ಲಾನ್ ಗೋನಿ ಅವರು ಅಂಡರ್ ವರ್ಲ್ಡ್ ಡಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.ಅಲ್ಲದೇ ಹಕ್ ಸೇ 2 ವೆಬ್ ಸಿರೀಸ್ ದಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಏಕ್ತಾ ಕಪೂರ್ ಈಗಾಗಲೇ ಘೋಷಿಸಿದ್ದಾರೆ. ಈ ಮೂಲಕ ಎರಡು ವೆಬ್ ಸಿರೀಸ್ ನಲ್ಲಿ ಅವರು ಅಭಿನಯಿಸಲಿದ್ದಾರೆ.ಈ ಕುರಿತು ಅರ್ಸ್ಲಾನ್ ಗೋನಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಸ್ಟಂಟ್ ಮಾಡುವುದೆಂದರೆ ಭಾರಿ ಇಷ್ಟ. ಕಥೆ ಇಷ್ಟವಾದರೇ ಹಿಂದೆ ಮುಂದೆ ನೋಡದೆ, ಯಾವುದೇ ಸಹಾಯವಿಲ್ಲದೇ, ಸ್ಟಂಟ್ ಮಾಡುವೆ. ಮೈ ಹೀರೋ ಬೊಲ್ರಹಾ ಹು ಚಿತ್ರ ಕಥೆಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಈ ಚಿತ್ರ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ವಿಶ್ವಾಸ ನನಗಿದೆ. ನನ್ನ ಪ್ರತಿಭೆಯನ್ನು ಹೊರಹಾಕಲು ಇದೊಂದು ಉತ್ತಮ ಅವಕಾಶ ಎಂದರು.