ಎಪಿಎಂಸಿ ನೂತನ ಅಧ್ಯಕ್ಷರಾಗಿ ಕೊಂಡವಾಡ, ಉಪಾಧ್ಯಕ್ಷರಾಗಿ ಮೌಳಿ ಆಯ್ಕೆ

ಾಮದುರ್ಗ 03: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಫಕೀರಪ್ಪ ಸಿದ್ದಪ್ಪ ಕೊಂಡವಾಡ, ಉಪಾಧ್ಯಕ್ಷರಾಗಿ ಸಿದ್ದಪ್ಪ ಫಕೀರಪ್ಪ ಮೌಳಿ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ದ್ಯಾವಪ್ಪ ಬೆಳವಡಿ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಬರದೇಲಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ಸಂಖ್ಯಾಬಲದ ಕೊರತೆಯಿಂದ ಇಬ್ಬರೂ ತಮ್ಮ ನಾಮಪತ್ರ ಹಿಂಪಡೆದುಕೊಂಡ ಕಾರಣ ಚುನಾವಣಾಧಿಕಾರಿ, ತಹಶೀಲ್ದಾರ್ ಆರ್. ವ್ಹಿ. ಕಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದಶರ್ಿ ಮಹೇಶ ಮಟ್ಟಿ ಕಾರ್ಯನಿರ್ವಹಿಸಿದರು.

ನಾಮನಿದರ್ೇಶಿತ ಸದಸ್ಯರು ಸೇರಿ 16 ಸದಸ್ಯರನ್ನೊಳಗೊಂಡ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಿಜೆಪಿ-7, ಕಾಂಗ್ರೆಸ್-9 ಸದಸ್ಯರ ಸಂಖ್ಯಾಬಲಾಬಲ ಹೊಂದಿದ್ದು, ಸ್ಪಷ್ಟ ಬಹುಮತ ಹೊಂದಿದ ಕಾಂಗ್ರೆಸ್ ಅಭ್ಯಥರ್ಿಗಳೇ ಆಯ್ಕೆಯಾಗುವಂತಾಯಿತು.

ಎಪಿಎಂಸಿ ಸರ್ವ ಸದಸ್ಯರು ಸೇರಿದಂತೆ ಉಭಯ ಪಕ್ಷಗಳ ಮುಖಂಡರು ಹಾಗೂ ಇತರರಿದ್ದರು.