ಎ.ಪಿ.ಎಂ.ಸಿ ಹೊಸ ಮಳಿಗೆಗಳು, ಇತರೆ ಖಾಲಿ ಕಟ್ಟಡಗಳ ಹಂಚಿಕೆ
ಕೊಪ್ಪಳ 06 : ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ವಾರ್ಷಿಕ ಕ್ರಿಯಾ ಯೋಜನೆಯಡಿ ನಿರ್ಮಿಸಿದ 11 ಹೊಸ ಚಿಕ್ಕ ಮಳಿಗೆಗಳು ಹಾಗೂ ಇತರೆ ಖಾಲಿ ಕಟ್ಟಡಗಳನ್ನು ಲೀವ್ ್ಘ ಲೈಸನ್ಸ್ ಆಧಾರದ ಮೇಲೆ ಹಂಚಿಕೆ ಮಾಡಲು ಮಂಗಳವಾರ (ಮಾ.4) ಜರುಗಿದ ಟೆಂಡರ್ ಕಂ ಬಹಿರಂಗ ಹರಾಜಿನಲ್ಲಿ ಸುಮಾರು 200 ಕ್ಕೂ ಹೆಚ್ಚು ಅರ್ಜಿದಾರರು ಭಾಗವಹಿಸಿ, ಹಂಚಿಕೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ವಿ.ಬಸವರಾಜ ಹಾಗೂ ಸಹಾಯಕ ಕಾರ್ಯದರ್ಶಿ ಸುಮ ಹೆಚ್.ಕೆ., ಲೆಕ್ಕಿಗರು ಹನುಮಂತಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.