ಎಪಿಎಂಸಿ ರಸ್ತೆ ಡಾಂಬರೀಕರಣ: ಕಾಮಗಾರಿ ಪರಿಶೀಲಿಸಿದ ಶಾಸಕ ಅರುಣಕುಮಾರ

ಲೋಕದರ್ಶನವರದಿ

ರಾಣೇಬೆನ್ನೂರು22: ಇಲ್ಲಿನ ಪ್ರಧಾನ ಅಂಚೆಕಛೇರಿ ಬಳಿಯಿಂದ ನಗರ ಪೋಲೀಸ್ ಠಾಣಾ ಅಶೋಕ ವೃತ್ತದವರೆಗೂ ಪಕ್ಕಾ ಡಾಂಭಾರ್ ರಸ್ತೆ ಕಾಮಾಗಾರಿ ಆರಂಭವಾಗಿದ್ದು, ಸ್ಥಳಕ್ಕೆ ಧಾವಿಸಿದ್ದ, ಶಾಸಕ ಅರುಣಕುಮಾರ ಪೂಜಾರ ಮತ್ತವರ ಕಾರ್ಯಕರ್ತರು ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಗರದ ಬಹುತೇಕ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಆರಂಭವಾಗಿದ್ದು, ಗುಣಮಟ್ಟದ ಮತ್ತು ಪರಿಪೂರ್ಣ ಸುಭದ್ರ ಕೆಲಸ ಪಡೆಯಲು ಅಲ್ಲಿನ ನಾಗರೀಕರು ಸ್ಥಳೀಯವಾಗಿ ಪರಿಶೀಲನೆ ನಡೆಸಬೇಕು. 

 ಇದರಿಂದ ಕಾಮಗಾರಿ ನಡೆದಿರುವ ಬಗ್ಗೆ ಸಮಗ್ರ ಮಾಹಿತಿ ತಿಳಿಯಲು ಸಾಧ್ಯವಾಗುವುದು ಎಂದ ಅವರು ಕಾಮಗಾರಿ ಮಾಡುವ ಕಾಮರ್ಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಬಾರದಂತೆ ನೋಡಿಕೊಂಡು ಸಹಕರಿಸಬೇಕು ಎಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಚೋಳಪ್ಪ ಕಸವಾಳ, ನಗರಸಭೆಯ ಗುಡಸಲಮನಿ, ಪವನ್ಕುಮಾರ ಮಲ್ಲಾಡದ, ಈರಣ್ಣ ಸೇರಿದಂತೆ ಮತ್ತಿತರ ಗಣ್ಯರು ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.