ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಎಪಿ ಅರ್ಜುನ್

ಬೆಂಗಳೂರು,  ಮೇ 10 ,ಲಾಕ್ ಡೌನ್ ನಡುವೆಯೂ  ಸ್ಯಾಂಡಲ್​ವುಡ್​ ನಿರ್ದೇಶಕ ಎ.ಪಿ.  ಅರ್ಜುನ್​ ಅವರು  ಅನ್ನಪೂರ್ಣ ಜತೆಗೆ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಅನ್ನಪೂರ್ಣ  ಅವರು ಹಾಸನ ಮೂಲದವರಾಗಿದ್ದು,  ಬೆಂಗಳೂರಿನ ಸ್ವಗೃಹದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ  ಅರ್ಜುನ್ ಹಾಗೂ ಅನ್ನಪೂರ್ಣ ಅವರ ಕಲ್ಯಾಣ ಸರಳವಾಗಿ ನೆರವೇರಿದೆ.ವಿವಾಹ ಕಾರ್ಯಕ್ರಮದಲ್ಲಿ, ಕುಟುಂಬದವರು, ಆಪ್ತರು, ಸಿನಿಮಾ ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದರು.ನವದಂಪತಿಗೆ ನಟ ಧ್ರುವ ಸರ್ಜಾ ದಂಪತಿ, ನಿರ್ದೇಶಕರಾದ ಪವನ್​ ಒಡೆಯರ್​, ತರುಣ್​ ಸುಧೀರ್​, ಪ್ರೇಮ್​ ಸೇರಿ ಹಲವು ಸಿನಿ ಸ್ನೇಹಿತರು ಶುಭಕೋರಿದ್ದಾರೆ. ಅರ್ಜುನ್ ಅವರು 'ಅಂಬಾರಿ', 'ಅದ್ದೂರಿ', 'ರಾಟೆ', 'ಐರಾವತ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ.