ಕೋವಿಡ್-19 ಭೀತಿ; ಬೊಲಿವಿಯಾದಿಂದ ಯೂರೋಪಿಗೆ ವಿಮಾನ ಸಂಚಾರ ಸ್ಥಗಿತ ಲಾಪಾಜ್


ಲಾಪಾಜ್, ಮಾರ್ಚ್.13: ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಬೊಲಿವಿಯಾವು ಮಾರ್ಚ್ 14 ರಿಂದ ಯುರೋಪಿನೊಂದಿಗೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಿದೆ ಎಂದು ಹಂಗಾಮಿ ಅಧ್ಯಕ್ಷ ಜೀನೈನ್ ಅನೆಜ್ ಗುರುವಾರ ತಿಳಿಸಿದ್ದಾರೆ. ಬೊಲಿವಿಯಾದಲ್ಲಿ ಇದುವರೆಗೆ ಮೂರು ಕರೋನವೈರಸ್ ಪ್ರಕರಣಗಳನ್ನು ದಾಖಲಾಗಿವೆ. ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 1,27,000ಕ್ಕೂ ಮೀರಿದ್ದು, ಹಾನಿಗೊಳಗಾದವರಲ್ಲಿ ಯುರೋಪಿಯನ್ ರಾಷ್ಟ್ರಗಳ ಪಾಲು ಹೆಚ್ಚಿದೆ. ಚೀನಾದ ನಂತರ ಇಟಲಿ ಅತಿ ಹೆಚ್ಚು ವೈರಸ್ ಹರಡಿರುವ ರಾಷ್ಟ್ರವಾಗಿದೆ. ದೇಶದಾದ್ಯಂತ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ತರಗತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ. ಮಾರ್ಚ್.14 ರಿಂದ 31ರ ವರೆಗೆ ಯುರೋಪಿಗೆ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗುತ್ತದೆ ಎಂದು ಅನೆಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಮೂಹಿಕ ಕಾರ್ಯಕ್ರಮಗಳಾದ ಸಂಗೀತ ಕಚೇರಿಗಳು, ಕ್ರೀಡೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಗಳನ್ನು ಕೆಲ ದಿನಗಳ ಕಾಲ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು. ಮೇ 3 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಸಿದ್ಧತೆಗಳು ನಿಗಧಿತ ರೀತಿಯಲ್ಲಿ ನಡೆಯಲಿವೆ ಎಂದು ಸುಪ್ರೀಂ ಚುನಾವಣಾ ನ್ಯಾಯಮಂಡಳಿಯ ಮುಖ್ಯಸ್ಥ ಸಾಲ್ವಡಾರ್ ರೊಮೆರೊ ಬೊಲಿವಿಸಿಯನ್ ಚಾನೆಲ್ಗೆ ನೀಡಿದ ಸಂದರ್ಶನದ ಹೇಳಿಕೆಯಲ್ಲಿ ತಿಳಿಸಿದ್ದಾರೆ.