ಮಾತೃಶ್ರೀ ಯೋಜನೆಯನ್ನು ಮುಂದುವರಿಸುವಂತೆ ಆಗ್ರಹಿಸಿ ಎಐಎಂಎಸ್ಎಸ್ ಮನವಿ

ಬಳ್ಶಾರಿ೧೮: ಕರ್ನಾಟಕ ರಾಜ್ಯಸರ್ಕಾರ ವು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ, ಗಭರ್ಿಣಿ ಹಾಗೂ ಬಾಣಂತಿಯರ ಆರೋಗ್ಯ ಹಿತದೃಷ್ಟಿಯಿಂದ ಆಯೋಜಿಸಲಾಗಿದ್ದ ಮಾತೃಶ್ರೀ ಯೋಜನೆಯನ್ನು ಕೈಬಿಡುವುದಾಗಿ ಘೋಷಿಸಿದೆ. ಆದರೆ ಕೋವಿಡ್-19 ಮಹಾಮಾರಿಯಿಂದ ಇಡೀ ದೇಶವೇ ತತ್ತರಿಸುತ್ತಿರುವ, ಈ ಸಂದರ್ಭದಲ್ಲಿ ಇಡೀ ರಾಜ್ಯದ ಮಹಿಳೆಯರ ಪರವಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ, ಬಳ್ಳಾರಿ ಸಮಿತಿಯು ಈ ಕೆಳಕಂಡ ವಿಷಯಗಳನ್ನು ತಮ್ಮ ಮುಂದಿಡಲು ಇಚ್ಛಿಸುತ್ತದೆ. 

       ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಗಭರ್ಿಣಿ ಮತ್ತು ಬಾಣಂತಿಯರಿಗೆ ,ಪೌಷ್ಟಿಕ ಮತ್ತು ಆರೋಗ್ಯ ಮಟ್ಟ ಸುಧಾರಿಸಲು ಮಾತೃಶ್ರೀ ಯೋಜನೆಯನ್ನು ರಾಜ್ಯ ಸಕರ್ಾರದಿಂದ  ಹಿಂದೆ ಜಾರಿಗೆ ತರಲಾಗಿತ್ತು. ಈ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್ ಕುಟುಂಬ) ಗಭರ್ಿಣಿ ಮತ್ತು ಬಾಣಂತಿಯರಿಗೆ ಅತ್ಯಂತ ಅನುಕೂಲಕರವಾಗಿತ್ತು. ಒಟ್ಟು ಎರಡು ಕಂತುಗಳಲ್ಲಿ ಅಂದರೆ ಹೆರಿಗೆ ಪೂರ್ವದಲ್ಲಿ ತಲಾ 3000 ರೂ ಹಾಗೂ ಹೆರಿಗೆ ನಂತರ ರೂ 3,000 ಒಟ್ಟು 6000ರೂ ಆಥರ್ಿಕ ಸಹಾಯ ನೀಡುವ ಯೋಜನೆ ಇದಾಗಿತ್ತು. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ (ಪಿಎಂಎಂವಿವೈ)ಎಂಬುದು ಗಭರ್ಿಣಿ, ಬಾಣಂತಿಯರಿಗೆ ,ಕೇಂದ್ರಸಕರ್ಾರದ ಇನ್ನೊಂದು ಯೋಜನೆ .ಗಭರ್ಿಣಿ ,ಬಾಣಂತಿಯರಿಗೆ ಮೂರು ಕಂತುಗಳಲ್ಲಿ 5,000 ನಗದು ಸಹಾಯಧನ ಫಲಾನುಭವಿಯ ,ಖಾತೆಗೆ ನೇರವಾಗಿ ವಗರ್ಾವಣೆ ಮಾಡಲಾಗುತ್ತಿತ್ತು ; ಹಾಗೂ ರಾಜ್ಯ ಸಕರ್ಾರದ ಇನ್ನೊಂದು ಮಹತ್ವಪೂರ್ಣವಾದ ಯೋಜನೆ ಮಾತೃಪೂರ್ಣ ಯೋಜನೆ .ಇದರ ಪ್ರಕಾರ ಗಭರ್ಿಣಿ ಹೆಣ್ಣು ಮಕ್ಕಳ ಪೌಷ್ಟಿಕತೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ.  

    ಕೇಂದ್ರ ಸಕರ್ಾರ ,ರಾಜ್ಯ ಸಕರ್ಾರದ ಈ ಯೋಜನೆಗಳು ಇರುವಾಗ ಆಥರ್ಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಅರಾಜ್ಯ ಸಕರ್ಾರವು ಮಾತೃಶ್ರೀ ಯೋಜನೆಯನ್ನು ಕೈಬಿಡುವ ನಿಧರ್ಾರವನ್ನು ತಿಳಿಸಿದೆ .ಆದರೆ ಈ ಎಲ್ಲಾ ಯೋಜನೆಗಳಿಂದ  ದೊರಕುವ ಒಟ್ಟು ಹಣ, ಹೆಣ್ಣು ಮಕ್ಕಳ ಪೌಷ್ಟಿಕತ, ಪ್ರಸವ ಪೂರ್ವ ಹಾಗೂ ಪ್ರಸವ ನಂತರದ ಖಚರ್ುಗಳಿಗೆ ಹೋಲಿಸಿದರೆ  ಏನೇನೂ ಅಲ್ಲ. ಹಾಗಿದ್ದೂ ಕೂಡಾ, ಈ ಯೋಜನೆಯಿಂದ ಅನೇಕ ಗಭರ್ಿಣಿ ಮತ್ತು ಬಾಣಂತಿಯರಿಗೆ ಸಹಾಯವಾಗಿ, ಹೆರಿಗೆ ಸಂದರ್ಭದ ಸಾವಿನ ಪ್ರಮಾಣಗಳು ಗಣನೀಯವಾಗಿ ಕಡಿಮೆಯಾಗಿದ್ದವು. ಪ್ರಸ್ತುತ ರಾಜ್ಯದಲ್ಲಿ 4. 19 ಲಕ್ಷ ಗಭರ್ಿಣಿಯರು, 4.02 ಲಕ್ಷ ಬಾಣಂತಿಯರು ಇದ್ದು , ಒಟ್ಟಾರೆ 8.22 ಲಕ್ಷ ಫಲಾನುಭವಿಗಳಿಗೆ ಈ ಯೋಜನೆ ತಲುಪುತ್ತಿತ್ತು. ಆದರೆ ಇದೀಗ ಲಾಕ್ಡೌನ್  ಸಂದರ್ಭದಲ್ಲಿ ಗಭರ್ಿಣಿಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಕಳೆದ ಎರಡು ತಿಂಗಳಲ್ಲಿ  1206 ನವಜಾತ ಶಿಶುಗಳು ಮೃತಪಟ್ಟಿರುವುದು ವರದಿಯಾಗಿದೆ. ಆದರೀಗ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಕರ್ಾರ, ಆಥರ್ಿಕ ಸಂಕಷ್ಟದ ಕಾರಣದಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಿದೆ . ಇತ್ತೀಚೆಗೆ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲೂ ನೊಂದ ಮಹಿಳೆಯರಿಗೆ ಭರವಸೆ ,ಆಶ್ರಯ, ಸಾಂತ್ವನ ನೀಡುತ್ತಿದ್ದ ಸಾಂತ್ವನ ಕೇಂದ್ರಗಳನ್ನು ಮುಚ್ಚಲು ಹೊರಟಿತ್ತು. ಅದೇ ರೀತಿ ಮಾತೃಶ್ರೀ ಯೋಜನೆಯು ಅನೇಕ ಹೆಣ್ಣುಮಕ್ಕಳಿಗೆ ಸಹಕಾರಿಯಾಗಿದ್ದು ಮುಂದುವರಿಸಬೇಕೆಂದು ಕೇಳಿಕೊಳ್ಳುತ್ತೇವೆ.ಈಗಾಗಲೇ ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.    ಇಂದು ಪ್ರತಿ ಇಬ್ಬರು ಮಹಿಳೆಯರಲ್ಲಿ ಒಬ್ಬ ಮಹಿಳೆ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇಂತಹ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಆಳುವ ಸಕರ್ಾರ ಈಗಾಗಲೇ ಜಾರಿಯಲ್ಲಿದ್ದಂತಹ ಮಾತೃಶ್ರೀ ಯೋಜನೆಯನ್ನು ಕೈಬಿಡದೆ, ಮತ್ತೊಮ್ಮೆ ಮುಂದುವರಿಸಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟಣೆ(ಎಐಎಂಎಸ್ಎಸ್) ಬಳ್ಳಾರಿ ಜಿಒಣ್ ಸಮಿತಿಯು ಒತ್ತಾಯಿಸುತ್ತದೆ