ಉದ್ಯೋಗದ ಹಕ್ಕಿಗಾಗಿ ಎಐಡಿವೈಓ ಪ್ರತಿಭಟನೆ

ಲೋಕದರ್ಶನ ವರದಿ

ಧಾರವಾಡ08: ನಗರದ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಜಿಲ್ಲಾ ಸಮಿತಿಯಿಂದ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. 

ಇದೇ ಸಂದರ್ಭದಲ್ಲಿ ದೇಶದಾದ್ಯಂತ ಸಕರ್ಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಸಮರೋಪಾದಿಯಲ್ಲಿ ಭತರ್ಿಮಾಡಲು, ಉದ್ಯೋಗ ದೊರೆಯುವವರೆಗೆ ಎಲ್ಲ ಅರ್ಹ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ಖಾತ್ರಿಪಡಿಸಲು, 'ಉದ್ಯೋಗದ ಹಕ್ಕ'ನ್ನು ಮೂಲಭೂತ ಹಕ್ಕೆಂದು ಘೋಷಿಸಲು ಹಾಗೂ ಗುತ್ತಿಗೆ ಪದ್ಧತಿಯನ್ನು ನಿಷೇಧಿಸಿ ಎಲ್ಲರಿಗೂ ಖಾಯಂ ಉದ್ಯೋಗವನ್ನು ಖಾತ್ರಿಪಡಿಸಲು ಆಗ್ರಹಿಸಲಾಯಿತು.

     ಎಐಡಿವೈಓ   ಜಿಲ್ಲಾಧ್ಯಕ್ಷರಾದ ರಮೇಶ ಹೊಸಮನಿಯವರು ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಸಕರ್ಾರ ಪ್ರತೀ ವರ್ಷ 2 ಕೋಟಿ ಹೊಸ ಉದ್ಯೋಗವನ್ನು ಸೃಷ್ಟಿಸುವುದಾಗಿ ಯುವಜನರಿಗೆ ಬರವಸೆ ಕೊಟ್ಟು ಅಧಿಕಾರದ ಗದ್ದುಗೆಯನ್ನೇರಿದರು. ಆದರೆ ಅವರ ಅಧಿಕಾರದ ಸಂದರ್ಭದಲ್ಲಿಯೇ ಸಕರ್ಾರಿ ಸಂಸ್ಥೆ ಎನ್.ಎಸ್.ಎಸ್.ಓ ಹೇಳುವಂತೆ ಕಳೆದ 45 ವರ್ಷಗಳಲ್ಲೇ ಅತೀ ಹೆಚ್ಚಿನ ನಿರುದ್ಯೋಗ ಸಮಸ್ಯೆಯನ್ನು ಭಾರತದ ಯುವಜನರು ಎದುರಿಸುವಂತಾದದ್ದು ಮೋದಿ ಸಕರ್ಾರದ ಯುವಜನರ ಬಗೆಗಿನ ನಿಷ್ಕಾಳಜಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಮತ್ತೊಂದೆಡೆ ಕೇಂದ್ರದ ಹಣಕಾಸು ಸಚಿವರಾದ ಅರುಣ ಜೇಟ್ಲಿಯವರು ಭಾರತದಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲವೆಂದು ಹಸಿ ಸುಳ್ಳು ಹೇಳುತ್ತಿದ್ದಾರೆ.

        ಚುನಾವಣೆಯ ಸಂಧರ್ಭದಲ್ಲಿ 'ಉದ್ಯೋಗ ನೀಡುತ್ತೇವೆ' ಎಂಬ ಆಶ್ವಾಸನೆಯನ್ನು ನೀಡುವ ಎಲ್ಲ ರಾಜಕೀಯ ಪಕ್ಷಗಳು ಯುವಜನತೆಗೆ ನಿರಂತರವಾಗಿ ದ್ರೋಹ ಬಗೆದಿವೆ. ಇಂದು ಯುವಜನರು ಉದ್ಯೋಗಗಳಿಲ್ಲದೇ ಬೀದಿ-ಬೀದಿ ಅಲೆಯುತ್ತಿದ್ದಾರೆ. 

    ಇತ್ತೀಚೆಗೆ ರಾಜಸ್ಥಾನದಲ್ಲಿ 4 ಯುವಜನರು ರೈಲಿಗೆ ಹಾರಿ ಆತ್ಮಹತ್ಯೆಗೆ ಶರಣಾದದ್ದು ಖೇಧಕರ. ಆದರೆ ಯುವಜನರ ಸಮಸ್ಯೆಗಳ ಬಗ್ಗೆ ಸಂವೇದನೆಯೇ ಇರದ ಸಕರ್ಾರಗಳು ಅಧಿಕಾರಕ್ಕಾಗಿ ಜನರ ಬಾವನಾತ್ಮಕ ವಿಷಯಗಳಾದ ಜಾತಿ-ಧರ್ಮಗಳನ್ನು ಮುನ್ನೆಲೆಗೆ ತಂದು ಯುವಜನರನ್ನು ದಿಕ್ಕುತಪ್ಪಿಸುವ ಪ್ರಯತ್ನದಲ್ಲಿವೆ. ಇದಕ್ಕೆ ಯುವಜನರು ಬಲಿಯಾಗದೆ ಉನ್ನತ ನೀತಿ ನೈತಿಕತೆಗಳಡಿಯಲ್ಲಿ ತಮ್ಮ ಹಕ್ಕುಗಳಿಗೋಸ್ಕರ ಹೋರಾಟವನ್ನು ಬೆಳೆಸಬೇಕಿದೆ ಎಂದರು.

       ಎಐಡಿವೈಓ ಜಿಲ್ಲಾ ಕಾರ್ಯದಶರ್ಿ ಭವಾನಿಶಂಕರ್ ಎಸ್.ಗೌಡ ಮಾತನಾಡಿ ಇದೇ 15ರಂದು ನಿರುದ್ಯೋಗದ ವಿರುದ್ಧ ಮೈಸೂರಿನಲ್ಲಿ ರಾಜ್ಯಮಟ್ಟದ ಯುವಜನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು. 

       ಎಐಡಿವೈಓ ಜಿಲ್ಲಾ ಜಂಟಿ ಕಾರ್ಯದಶರ್ಿ ಹನುಮೇಶ ಹುಡೇದ ಅಧ್ಯಕ್ಷತೆ ವಹಿಸಿದ್ದರು. ವೃತ್ತಿಪರ ಕೋಸರ್್ಗಳ ತರಬೇತುದಾರರು, ವಿದ್ಯಾಥರ್ಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು