ಲೋಕದರ್ಶನವರದಿ
ಕುರುಗೋಡು26: ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾಥರ್ಿಗಳ ಶಿಕ್ಷಣದ ಗುಣಮಟ್ಟ ಕಾಪಾಡುವಂತೆ ಮತ್ತು ವಿದ್ಯಾಥರ್ಿಗಳ ಪರವಾದ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಕರ್ಾರಕ್ಕೆ ಒತ್ತಾಯಿಸಿ ಎಐಡಿಎಸ್ಓ ವಿದ್ಯಾಥರ್ಿ ಸಂಘಟನೆಯು ಮಂಗಳವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಗುರಳ್ಳಿ ರಾಜ ಮಾತನಾಡಿ, ರಾಜ್ಯಾದ್ಯಂತ ಕೊರೊನಾ ವೈರಸ್ ಬೀತಿಯು ದಿನದಿನೇ ಹೆಚ್ಚುತ್ತಿದ್ದು, ಅನಿರೀಕ್ಷಿತ ಲಾಕ್ಡೌನ್ನಿಂದ ಕೆಳವರ್ಗದ ಜನರ ಬದುಕು ಕ್ಲೀಷ್ಟಕರ ಪರಿಸ್ಥಿತಿಗೆ ತಲುಪಿದೆ.
ಇಂತಹ ಸ್ಥಿತಿಯಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಬಡ ವಿದ್ಯಾಥರ್ಿಗಳಿಗೆ ಅನೇಕ ಸಮಸ್ಯಗಳು ಎದುರಾಗುತ್ತಿದ್ದು, ಆಗಾಗಿ ವಿದ್ಯಾಥರ್ಿಗಳಿಗೆ ಅನುಕೂಲವಾಗುವಂತೆ ಎಲ್ಲಾ ಸಕರ್ಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳ ಶುಲ್ಕವನ್ನು ಸಕರ್ಾರವೇ ಭರಿಸಬೇಕು, ವಿಶ್ವ ವಿದ್ಯಾಲಯಗಳ ಪರೀಕ್ಷಾ ಶುಲ್ಕ ರದ್ದು ಪಡಿಸಬೇಕು.
ಉಚಿತ ಬಸ್ ಪಾಸ್ ನೀಡಬೇಕು, ಶಿಷ್ಯ ವೇತನ ಹೆಚ್ಚಿಸಿ ಕಡ್ಡಾಯವಾಗಿ ನೀಡಬೇಕು, ಹಾಸ್ಟೆಲ್ ಸೌಕರ್ಯ ಶೈಕ್ಷಣಿಕ ಪ್ರಾರಂಭದಲ್ಲೇ ಒದಗಿಸಬೇಕು.
ಕ್ವಾರಂಟೈನ್ ಕೇಂದ್ರಗಳಾಗಿ ಬಳಿಸಿದ ಶಾಲಾ, ಕಾಲೇಜ್ ಹಾಸ್ಟೆಗಳನ್ನು ಶುದ್ಧಿಕರಿಸಬೇಕು ವಿದ್ಯಾಥರ್ಿ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಹಗೂ ಇನ್ನಿತರ ವಿದ್ಯಾಥರ್ಿಗಳ ಅವಶ್ಯಕ ಬೇಡಿಕೆಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಸಚಿವರು ಹಾಗೂ ಸಕರ್ಾರವು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಲ್ಲೇಶಪ್ಪ ಮೇಲಾಧಿಕಾರಿಗಳಿಗೆ ಕಳುಹಿಸಲಾಗುವ ಭರವಸೆ ನೀಡಿದರು.
ಸಂಘಟನೆಯ ಅಖಿಲ ಭಾರತ ಉಪಾಧ್ಯಕ್ಷ ಡಾ|| ಪ್ರಮೋದ್, ಪದಾಧಿಕಾರಿಗಳಾದ ಅಂಬರೀಶ್, ಮುನಿಯಪ್ಪ, ಅಶೋಕ, ಚನ್ನಯ್ಯ, ಕಲಾಂದರ್ ಹಾಗೂ ಇನ್ನತರರು ಇದ್ದರು.