ಸೋನಂ ವಾಂಗ್ಚುಕ್ ಬೆಂಬಲಿಸಿ ಎಐಡಿಎಸ್ಒ ಪ್ರತಿಭಟನೆ
AIDSO protests in support of Sonam Wangchuk
ಲೋಕದರ್ಶನ ವರದಿ
ಧಾರವಾಡ 18 : ಸೋನಂ ವಾಂಗ್ಚುಕ್ ಹಾಗೂ ಇತರೆ ಉಪವಾಸನಿರತ ಹೋರಾಟಗಾರರೊಂದಿಗೆ ನಾವಿದ್ದೇವೆ, ಹೋರಾಟಗಾರರೊಂದಿಗೆ ಪ್ರಜಾತಾಂತ್ರಿಕ ಸಂವಾದ ಆರಂಭಿಸಲು ಆಗ್ರಹಿಸಿ ಹಾಗೂ ಉಪವಾಸ ನಿರತ ಹೋರಾಟಗಾರರನ್ನು ಬಲವಂತವಾಗಿ ಎಳೆದೊಯ್ದ ಸರ್ಕಾರದ ಅಪ್ರಜಾತಾಂತ್ರಿಕ ನಡೆಯನ್ನು ಖಂಡಿಸಿ ಇಂದು ವಿವೇಕಾನಂದ ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳು ಎಐಡಿಎ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.!
ಪ್ರತಿಭಟನೆಯನ್ನು ಉದ್ದೇಶಿಸಿ “ಹಿರಿಯ ಸಾಹಿತಿಗಳಾದ ಹೇಮಾ ಪಟ್ಟಣಶೆಟ್ಟಿ ಅವರು ಮಾತನಾಡಿ ದೇಶದಾದ್ಯಂತ ಈ ಅನ್ಯಾಯದ ವಿರುದ್ಧ ಈಗಾಗಲೇ ಹಲವಾರು ಕಡೆ ಹೋರಾಟಗಳು ನಡೆದಿವೆ. ಅದೇ ರೀತಿ ಕಳೆದ 21 ದಿನದಿಂದ ದೆಹಲಿಯ ಜಂತರ್ ಮಂತರಲ್ಲಿ ಸೋನಂ ವಂಗ್ಚುಕ್ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಕಿಂಚಿತ್ತು ಕಾಳಜಿಯಾದರೂ ಇದ್ದರೆ ಅವರ ಜೊತೆಗೆ ಮಾತುಕತೆಯನ್ನು ನಡೆಸಬೇಕಿತ್ತು. ಆದರೆ ಇಲ್ಲಿಯವರೆಗೂ ಒಂದು ಮಾತನ್ನು ಕೂಡ ಆಡಿಲ್ಲ. ಇದು ಸರ್ಕಾರದ ನಿರ್ಲಕ್ಷವನ್ನು ತೋರಿಸುತ್ತದೆ. ಹಾಗೆ ಒಂದು ಪ್ರಜಾತಾಂತ್ರಿಕ ದೇಶದಲ್ಲಿ ಇದು ನಡೆಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.”
ಹಿರಿಯ ಕಲಾವಿದರಾದ ಬಿ ಮಾರುತಿ ಅವರು ಮಾತನಾಡಿ, “21 ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿರುವ ಸೋನಂ ವಾಂಗ್ಚುಕ್ ಅವರ ಜೊತೆಗೆ ಮಾತುಕತೆಗೆ ನಡೆಸಬೇಕಾದ ಕೇಂದ್ರ ಸರ್ಕಾರ, ಅದರ ಬದಲಾಗಿ ಅವರನ್ನು ಇಂದು ಜಂತರ್ ಮಂತರ್ ನಿಂದ ಬಲವಂತವಾಗಿ ತೆರವುಗೊಳಿಸಿರುವ ಅಪ್ರಜಾತಾಂತ್ರಿಕ, ಸರ್ವಾಧಿಕಾರಿ ಧೋರಣೆಯನ್ನು ಅತ್ಯುತ್ರವಾಗಿ ಖಂಡಿಸಿದರು.
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ 