ಗ್ರಾಮೀಣ ಜನರ ಆರ್ಥಿಕ ಸಬಲೀಕರಣ ಅಗತ್ಯ

ಗ್ರಾಮೀಣ ಜನರ ಆರ್ಥಿಕ ಸಬಲೀಕರಣ ಅಗತ್ಯ Economic empowerment of rural people is essential

ತಾಳಿಕೋಟಿ 18 :  ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕೂಲಿಕಾರ್ಮಿಕರು, ಸಣ್ಣ ವ್ಯಾಪಾರಸ್ಥರು, ದಿನಗೂಲಿ ನೌಕರರ ಸ್ವಸಹಾಯ ಗುಂಪುಗಳು ಹಾಗೂ ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಈ ಯುವಸಿರಿ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಲಾಗಿದೆ ಎಂದು ಯರನಾಳ ಯುವಸಿರಿ ಸೌ.ಸ.ಸಂ.ಅಧ್ಯಕ್ಷರಾದ ಶಂಕರಗೌಡ ಪಾಟೀಲ ಹೇಳಿದರು.

ಗುರುವಾರ ತಾಲೂಕಿನ ಹಿರೂರು ಗ್ರಾಮದಲ್ಲಿ ಸಂಘದ ಹತ್ತನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದಲ್ಲಿ 2001ರಲ್ಲಿ ಆರಂಭವಾದ ಈ ಸಂಘವು ಕೇವಲ 5 ವರ್ಷಗಳಲ್ಲಿ 10 ಶಾಖೆಗಳನ್ನು ಹೊಂದಿದ್ದು, 25 ಕೋಟಿ ಠೇವಣಿ, 30 ಕೋಟಿ ದುಡಿಯುವ ಬಂಡವಾಳ ಹಾಗೂ 1.5 ಕೋಟಿ ಶೇರು ಬಂಡವಾಳ ಹೊಂದಿ ಪ್ರಗತಿ ಹಂತದಲ್ಲಿದೆ.

ಸಂಘವು ವಿಶೇಷವಾಗಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ವಿಶೇಷ ಒತ್ತು ಕೊಟ್ಟು ಕೆಲಸ ಮಾಡುತ್ತಿದೆ. ಗ್ರಾಮೀಣ ಜನರ ಆರ್ಥಿಕ ಸಂಕಷ್ಟವನ್ನು ದೂರ ಮಾಡಿ ಸುಲಭವಾಗಿ ಸಾಲ ಸೌಲಭ್ಯ ಒದಗಿಸುವ ಮೂಲಕ ಅವರ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸುವ ಹಾಗೂ ದುಡಿಯುವ ಕೈಗಳಿಗೆ ಕೆಲಸ ಕೊಡುವ ದೃಷ್ಟಿಯಿಂದ ಸಂಘವು ಕೆಲಸ ಮಾಡುತ್ತಿದೆ. ಇವತ್ತು ಹಿರೂರ ಗ್ರಾಮದಲ್ಲಿ ಇದರ ಹತ್ತನೇ ಶಾಖೆಯನ್ನು ಆರಂಭಿಸಲಾಗಿದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.

ಈ ಸಮಯದಲ್ಲಿ ಹಿರೂರ ಶಾಖೆಯ ಅಧ್ಯಕ್ಷ ಗುರುಪಾದಪ್ಪ ಕೊಪ್ಪದ, ಉಪಾಧ್ಯಕ್ಷ ರಾಮನಗೌಡ ದೋರನಳ್ಳಿ, ಸಲಹಾ ಸಮಿತಿ ಸದಸ್ಯರಾದ ಪ್ರಭುಗೌಡ ಚೌದ್ರಿ, ಬಸನಗೌಡ ಯರಗಲ್, ಮೌನೇಶ ಬಡಿಗೇರ, ಶಿವಯೋಗಿ ಹಿರೇಮಠ, ಚೇತನ್ ದೇಸಾಯಿ, ದೇವೇಂದ್ರ ತಳವಾರ, ಬೀರ​‍್ಪ ಪೂಜಾರಿ, ಬಸಮ್ಮ ದೇ.ಕೊಪ್ಪದ, ಮಹಾದೇವಿ ನಾ.ಬಿರಾದಾರ, ವಲಯ ಅಧಿಕಾರಿ ನಾಗರಾಜ ಎಸ್‌.ಮದ್ದರಕಿ,

ವೇದ ಮೂರ್ತಿ ಸಿ.ಎಂ. ಹಿರೇಮಠ,ತಾಳಿಕೋಟಿ ಯುವಸಿರಿ ಬ್ಯಾಂಕ್ ಅಧ್ಯಕ್ಷರಾದ ಡಾ.ವಿಜಯಲಕ್ಷ್ಮಿ ಹಿರೇಮಠ, ಉಪಾಧ್ಯಕ್ಷ ರೇಣುಕಾ ಚಿಂಚೋಳ್ಳಿ, ಗಣ್ಯರಾದ ಬಸನಗೌಡ ಪಾಟೀಲ, ಐ.ಜಿ.ಹಿರೇಮಠ,ಅಣ್ಣುಗೌಡ ಪಾಟೀಲ, ಪಿಕೆಪಿಎಸ್ ಸದಸ್ಯ ಎಸ್ ಜಿ ಚೌದ್ರಿ, ಪಿಕೆಪಿಎಸ್ ಮಾಜಿ ಅಧ್ಯಕ್ಷರಾದ ದೇವೇಂದ್ರ​‍್ಪ ಬಿರಾದಾರ, ದೇವೇಂದ್ರ​‍್ಪ ಕೊಪ್ಪದ, ಶಾಂತಗೌಡ ಬಿರಾದಾರ ಹಾಗೂ ಗ್ರಾಮಸ್ಥರು ಇದ್ದರು.