ಗಾನಕೋಗಿಲೆ ಎಸ್. ಜಾನಕಿ ಸಾಧನೆ ಸ್ಮರಣೀಯ: ಡಾ. ಸಂಗಮೇಶ ಮಾಟೋಳಿ
The achievements of the melodious songstress S. Janaki are memorable: Dr. Sangamesha Matoli
ಲೋಕದರ್ಶನ ವರದಿ
ವಿಜಯಪುರ 18: ಕನ್ನಡ ಭಾಷೆ ಹಾಗೂ ಕನ್ನಡಿಗರನ್ನು ಅಪಾರವಾಗಿ ಪ್ರೀತಿಸಿದ ಗಾನಕೋಗಿಲೆ ಎಸ್. ಜಾನಕಿ ಅವರು ಯಾವುದೇ ಗುರುಗಳ ಮಾರ್ಗದರ್ಶನವಿಲ್ಲದೆ ತಮ್ಮ ಪ್ರತಿಭೆಯಿಂದಲೇ ಸಂಗೀತ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಅಪರೂಪದ ಗಾಯಕಿ ಎಂದು ನಿವೃತ್ತ ಪ್ರಾಚಾರ್ಯ ಡಾ. ಸಂಗಮೇಶ ಮಾಟೋಳಿ ಹೇಳಿದರು.
ನಗರದ ಡಾಲರ್ಸ್ ಕಾಲೋನಿಯ ಕಲ್ಪವೃಕ್ಷ ಸಭಾಭವನದಲ್ಲಿ ಸಾಹಿತ್ಯ ಸೌರಭ ವೇದಿಕೆ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ಎಸ್. ಜಾನಕಿ ಕುರಿತ ಸ್ವರನಮನ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿ.ಎಲ್.ಡಿ.ಇ. ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವೀರಭದ್ರ್ಪ ಮೆಂಡಾಗಳಿ ಮಾತನಾಡಿ, ಎಸ್. ಜಾನಕಿ ಅವರ ಧ್ವನಿ ಸಂಗೀತ ಲೋಕದ ಅಮೂಲ್ಯ ಕೊಡುಗೆಯಾಗಿದೆ. ಸಂಗೀತ ನಿರ್ದೇಶಕರ ನೀರೀಕ್ಷೆಗೆ ತಕ್ಕಂತೆ ಹಾಡುಗಳಿಗೆ ಜೀವ ತುಂಬುವ ಸಾಮರ್ಥ್ಯ ಅವರಲ್ಲಿತ್ತು. ಬಾಲ್ಯದಿಂದಲೇ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹಾಗೂ ಏಕಾಗ್ರತೆಯನ್ನು ಬೆಳೆಸಿಕೊಂಡಿದ್ದರಿಂದ ಅವರು ಶ್ರೇಷ್ಠ ಗಾಯಕಿಯಾಗಿ ಬೆಳೆದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಅಂಕಣಕಾರ ಬಸವರಾಜ ಗಿರಗಾಂವಿ, ಚಿದಾನಂದ ಜಡಿಮಠ, ಬಸವರಾಜ ಬಳೂಳಮಟ್ಟಿ, ರಾಜಶೇಖರ ಹೊಸಟ್ಟಿ, ಎಸ್.ಎಂ. ಕುಂಬಾರ, ಬಹುಬಲಿ ಬಿರಾದಾರ ಹಾಗೂ ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ರಾಜಶೇಖರ ಸಾಲಿಮಠ ಅವರು ಎಸ್. ಜಾನಕಿ ಅವರ ವ್ಯಕ್ತಿತ್ವ ಮತ್ತು ಸಂಗೀತ ಸಾಧನೆಯನ್ನು ಸ್ಮರಿಸಿದರು.
ಕು. ಸಿಂಚನಾ ಮುರುಗೋಡ, ರಾಮಪ್ಪ ಮೆಡ್ಲಿ, ರಮೇಶ್ ಹಲ್ಯಾಳ, ಬಿ.ಎನ್. ಅಸ್ಕಿ ಹಾಗೂ ಶ್ರೀನಿವಾಸ ಕುಂಟೆ ಅವರು ಎಸ್. ಜಾನಕಿ ಹಾಡಿದ ಜನಪ್ರಿಯ ಗೀತೆಗಳನ್ನು ಹಾಡುವ ಮೂಲಕ ಸ್ವರನಮನ ಸಲ್ಲಿಸಿದರು. ಶಿಕ್ಷಕ ರಮೇಶ್ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ದುಂಡಯ್ಯ ಹಿರೇಮಠ ವಂದಿಸಿದರು.
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ 