ಸಾಧನೆ ವಯಸ್ಸು ಅಡ್ಡಿಯಾಗದು ಎಂದು ತೋರಿಸಿದ ಶಿವಸುಬ್ರಮಣ್ಯನ್..!!

 ನವದೆಹಲಿ, ಫೆ 19 ,ಓದುವುದಕ್ಕೆ  ವಯಸ್ಸಿನ ಅಂತರವಿಲ್ಲ ಅದಕ್ಕೆ ಕೇವಲ ಛಲ,  ಬಲ ಗುರಿ ಯಿರಬೇಕು  ಎಂಬ ಮಾತನ್ನು ತಮಿಳುನಾಡು ಮೂಲದ ಶಿವಸುಬ್ರಮಣ್ಯನ್, ಸತ್ಯ ಮಾಡಿ ಛಲದಿಂದಲೇ  ತೋರಿಸಿದ್ದಾರೆ.  ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ಈ ಬಾರಿಯ ಘಟಿಕೋತ್ಸವದಲ್ಲಿ ತಮಿಳುನಾಡು ಮೂಲದ ಶಿವಸುಬ್ರಮಣ್ಯನ್, ತಮ್ಮ 93ನೇ ವರ್ಷದಲ್ಲಿ ಸ್ನಾತಕೋತ್ತರ ಪದವಿ ಪಡೆದು ಎಲ್ಲರ ಗಮನ ಸೆಳೆದು,  ಅಪ್ರತಿಮ ಸಾಧನೆ ಮಾಡಿ ಯುವಕರು ನಾಚುವಂತೆ ಮಾಡಿ ತೋರಿಸಿದ್ದಾರೆ. 

 1940ರ ದಶಕದಲ್ಲಿ ತಮಿಳುನಾಡಿನಲ್ಲಿ ಶಾಲಾ ಮಟ್ಟದ ವಿದ್ಯಾಭ್ಯಾಸ ಮುಗಿಸಿದ್ದ ಅವರು, ಕೌಟುಂಬಿಕ ಸಮಸ್ಯೆ ಇನ್ನಿತರೆ ಕಾರಣಕ್ಕಾಗಿ ಕಾಲೇಜು ವಿದ್ಯಾಬ್ಯಾಸ ಮಾಡಲು ಸಾಧ್ಯವಾಗಲಿಲ್ಲ ಬಳಿಕ ಅವರು   ಕೇಂದ್ರ ವಾಣಿಜ್ಯ ಸಚಿವಾಲಯದಲ್ಲಿ ಕ್ಲಕರ್್ ಆಗಿ ನೇಮಿಸಲ್ಪಟ್ಟು ನವದೆಹಲಿಗೆ  ಸ್ಥಳಾಂತರಗೊಂಡಿದ್ದರು. ಆಗಲೂ, ಬಿಡುವಿಲ್ಲದ ದುಡಿಮೆ, ಮದುವೆ- ಮಕ್ಕಳು, ಕುಟುಂಬ ಸಮಸ್ಯೆ  ಮುಂತಾದ ಕಾರಣಗಳಿಗಾಗಿ ಅವರ ಪದವಿ  ಕನಸು ಹಾಗೆಯೇ ಉಳಿದಿತ್ತು. ಈಗ ನಿವೃತ್ತಿಯ ನಂತರ, ಇಗ್ನೋದಲ್ಲಿ ಸಾರ್ವಜನಿಕ ಆಡಳಿತ ವಿಷಯದ ಪದವಿ ಶಿಕ್ಷಣ ಪಡೆದು  ಈಗ ಸ್ನಾತಕೋತ್ತರ ಪದವಿಯನ್ನೂ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ, ಸಾಧನೆಗೆ  ವಯಸ್ಸು ಅಡ್ಡಿಯಾಗದು, ನೆಪವಾಗದೂ  ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ.