70ರ ಕೊಳಕು, 20ರ ಹುಳುಕಿನ ಮೇಲೆ ಬೆಳಕು ಚೆಲ್ಲಲು ಅಗ್ನಿ ಶ್ರೀಧರ್ ಕಮ್ ಬ್ಯಾಕ್

ಬೆಂಗಳೂರು, ಫೆ 18, ಬೆಳ್ಳಿ ತೆರೆಯ ಮೇಲೆ ಬೆಂಗಳೂರಿನ ಭೂಗತ ಜಗತ್ತಿನ ಪರಿಚಯ ಮಾಡಿಸಿದ ಅಗ್ನಿ ಶ್ರೀಧರ್  ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ   ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ನಂತರ ಸಾಹಿತ್ಯದ ಕೃಷಿಯಲ್ಲಿ ಮಗ್ನರಾಗಿದ್ದ ಅಗ್ನಿ ಶ್ರೀಧರ್ ಇನ್ನೂ 10 ವರ್ಷಗಳಿಗಾಗುವಷ್ಟು ಚಿತ್ರಕಥೆಗಳ ಸರಕು ಹೊಂದಿದ್ದು, ಮನರಂಜನೆಯ ಜತೆಗೆ ಭೂಗತ ಜಗತ್ತನ್ನಾಳಿದ ಜೈರಾಜ್ ಕಥೆಯನ್ನು ಚಿತ್ರದ ಮೇಲೆ ತರಲು ಮುಂದಾಗಿದ್ದಾರೆ  ಅಶುಬೆದ್ರ  ನಿರ್ಮಾಣದ ನೂತನ ಚಿತ್ರ ಇದಾಗಿದ್ದು, 70ರ ದಶಕದ ಕೊಳಕಿನ ಜತೆಗೆ ಪ್ರಸ್ತುತ ರಾಜಕಾರಣದ ಹುಳುಕನ್ನೂ ಸೇರಿಸಿ  ಜೈರಾಜ್ ಭೂಗತ ಜಗತ್ತಿಗೆ ಬರಲು ಕಾರವೇನು ಎಂಬ ವಿಷಯದ ಮೇಲೆ ಬೆಳಕು ಚೆಲ್ಲಲು ಅಗ್ನಿ ಶ್ರೀಧರ್ ಸ್ಕ್ರಿಪ್ಟ್ ರೆಡಿ ಮಾಡಿದ್ದಾರಂತೆ  ಯುವ ಪ್ರತಿಭೆ ಶೂನ್ಯ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ   “ನನ್ನ ತಮ್ಮನ ಮಗ ಅಭಿಷೇಕ್ ವಸಂತ್, ಪುತ್ರಿ ವೀಣಾ ಅಪೂರ್ವ, ಶೂನ್ಯ, ಅಶುಬೆದ್ರೆಯ ಬಲವಂತದಿಂದ ಇತ್ತೀಚಿನ 10 ಕಮರ್ಷಿಯಲ್ಲ ಚಿತ್ರಗಳನ್ನು ವೀಕ್ಷಿಸಿದೆ   ಇದಕ್ಕಿಂತ ಉತ್ತಮವಾದ ಚಿತ್ರಗಳನ್ನು ಕನ್ನಡಕ್ಕೆ ನೀಡಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ನನ್ನ ಸುತ್ತಲಿನ ಯುವ ಸಮೂಹದಿಂದ ಕೇಳಿಬಂದ ಕಾರಣ ಮತ್ತೆ ಚಿತ್ರ ಮಾಡಲು ಮನಸ್ಸು ಮಾಡಿದೆ  ಇನ್ನೂ 10 ವರ್ಷ ಚಿತ್ರ ಮಾಡುತ್ತಿರುತ್ತೇನೆ” ಎಂದು ಅಗ್ನಿ ಶ್ರೀಧರ್ ತಿಳಿಸಿದ್ದಾರೆ .      

ಜೈರಾಜ್ ಪಾತ್ರದಲ್ಲಿ ಡಾಲಿ ಧನಂಜಯ್  ಜೈರಾಜ್ ಭೂಗತ ಜಗತ್ತಿಗೆ ಕಾಲಿಡುವ ಮುನ್ನ ಹೇಗಿದ್ದ ಎಂಬ ಕಥಾಹಂದರವನ್ನು ಚಿತ್ರ ಹೊಂದಿದ್ದು, ಯುವ ಜೈರಾಜ್ ಪಾತ್ರಕ್ಕೆ ಡಾಲಿ ಧನಂಜಯ್ ಜೀವ ತುಂಬಲಿದ್ದಾರೆ “ಇದಕ್ಕಾಗಿ ಎಲ್ಲ ತಯಾರಿ ಮಾಡಿಕೊಳ್ಳುತ್ತೇನೆ  ಇನ್ನೂ 2 ತಿಂಗಳು ಬೇರೆ ಚಿತ್ರಗಳ ಕಮಿಟ್ ಮೆಂಟ್ ಇದ್ದು ಆ ಬಳಿಕ ಇತ್ತ ಗಮನ ಹರಿಸುತ್ತೇನೆ” ಎಂದು ಡಾಲಿ ಧನಂಜಯ್ ಹೇಳಿದ್ದಾರೆ      ಜೈರಾಜ್ ಸ್ವತಃ ಪೈಲ್ವಾನ್ ಆಗಿದ್ದು, ಆತ ಅಭ್ಯಾಸ ಮಾಡುತ್ತಿದ್ದ ಗರಡಿ ಮನೆ ಈಗಲೂ ಹಾಗೇ ಇದೆ 70ರ ದಶಕವನ್ನು ಯಾವುದೇ ಸೆಟ್ಟಿಂಗ್ಸ್ ಇಲ್ಲದೆಯೇ ಕಟ್ಟಿಕೊಡಲು ಪ್ರಯತ್ನಿಸುತ್ತೇವೆ ಎಂದಿರುವ ಅಗ್ನಿ ಶ್ರೀಧರ್, ಆದಷ್ಟು ಶೀಘ್ರದಲ್ಲೇ ಚಿತ್ರದ ಶೀರ್ಷಿಕೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ.