ಭ್ರಷ್ಟ ಪೊಲೀಸ್ ಅಧಿಕಾರಿಗಳ‌ ಮೇಲೆ ಎಸಿಬಿ‌ ದಾಳಿ

ಬೆಂಗಳೂರು, ಮೇ 22,ಬೆಳ್ಳಂಬೆಳಗ್ಗೆ ಭ್ರಷ್ಟ ಪೊಲೀಸ್ ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಎಸಿಪಿ ಪ್ರಭುಶಂಕರ್, ಇನ್ಸ್ ಪೆಕ್ಟರ್ ಆರ್ ಎಂ ಅಜಯ್, ನಿರಂಜನ್ ಕುಮಾರ್ ಮನೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸಿಗರೇಟ್ ವಿತರಕರು ಮತ್ತು‌ ನಕಲಿ ಮಾಸ್ಕ್ ಮಾರಾಟಗಾರರಿಂದ ಕೊಟ್ಯಂತರ  ರೂ. ಲಂಚ ಪಡೆದ ಆರೋಪದಡಿ  ದಾಳಿ ನಡೆಸಲಾಗಿದೆ‌.ಸಹಕಾರ ನಗರದ ಎಸಿಪಿ ಪ್ರಭುಶಂಕರ್ ಮನೆ ಸೇರಿ  ನಗರದ ಏಳು ಕಡೆ ಡಿಎಸ್ ಪಿ ರಾಜೇಂದ್ರ ನೇತೃತ್ವದ ತಂಡ ದಾಳಿ ನಡೆಸಿದೆ.ಲಾಕ್  ಡೌನ್ ನಡುವೆ ಸಿಸಿಬಿಯ ಈ ಮೂವರು ಭ್ರಷ್ಟ ಅಧಿಕಾರಿಗಳು ಕೋಟಿ ಕೋಟಿ ಡೀಲ್​  ನಡೆಸಿದ್ದರು. ಅಕ್ರಮವಾಗಿ ಸಿಗರೇಟ್ ಮಾರಾಟಕ್ಕೆ ಅನುಮತಿ ನೀಡಿ ಲಂಚ ಪಡೆದಿದ್ದರು.  ಡೀಲ್​ ವ್ಯವಹಾರ ಬಯಲಿಗೆ ಬರುತ್ತಿದ್ದಂತೆ ಮೂವರು ಸಿಸಿಬಿ ಅಧಿಕಾರಿಗಳನ್ನು ಅಮಾನತು  ಮಾಡಿ, ಬಳಿಕ ಪ್ರಕರಣದ ತನಿಖೆಯನ್ನು ಎಸಿಬಿಗೆ ವರ್ಗಾಯಿಸಲಾಗಿತ್ತು.ಗುರುವಾರವಷ್ಟೇ ಲಂಚ ಪಡೆದ ಆರೋಪದಡಿ ಮೂವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ಮೂರು ಪ್ರತ್ಯೇಕ ಎಫ್.ಐ.ಆರ್ ದಾಖಲಿಸಿತ್ತು.