ಉಚಿತ ಬಸ್ಪಾಸ್ ವಿತರಣೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ


ಲೋಕದರ್ಶನ ವರದಿ

ವಿಜಯಪುರ, 18 : ವಿದ್ಯಾಥರ್ಿಗಳ ಉಚಿತ ಬಸ್ಪಾಸ್ ವಿತರಣೆ ಮಾಡುವಂತೆ ಆಗ್ರಹಿಸಿ ವಿದ್ಯಾಥರ್ಿಗಳ ಬೇಡಿಕೆಗೆ ಸ್ಪಂದಿಸದ ರಾಜ್ಯ ಸಕರ್ಾರದ ಕ್ರಮವನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಬುಧವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ತಡೆಮಾಡಿ ಪ್ರತಿಭಟಿಸಲಾಯಿತು.

ಈ ಸಂದರ್ಭದಲ್ಲಿ ವಿಭಾಗೀಯ ಸಂಚಾಲಕ ಸಚೀನ ಕುಳಗೇರಿ ಮಾತನಾಡಿ, ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸಕರ್ಾರದ 2018-19ನೇ ಸಾಲಿನ ವಾಷರ್ಿಕ ಬಜೆಟ್ನಲ್ಲಿ ಎಸ್ಸಿ/ಎಸ್ಟಿ ಸೇರಿದಂತೆರಾಜ್ಯದಎಲ್ಲಾ ವಿದ್ಯಾಥರ್ಿಗಳಿಗೆ ಉಚಿತ ಬಸ್ಪಾಸ್ ನೀಡುವುದಾಗಿ ಘೋಷಣೆಯನ್ನು ಮಾಡಲಾಗಿತ್ತು. ಆದರೆ ಇಂದಿನ ರಾಜ್ಯ ಸಕರ್ಾರ ಆ ಯೋಜನೆಯನ್ನು ಜಾರಿಗೋಳಿಸದೆ ಉಳಿದ ವಿದ್ಯಾಥರ್ಿಗಳಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯ ಸಕರ್ಾರದ ಈ ವಿದ್ಯಾಥರ್ಿ ವಿರೋಧಿಕ್ರಮವನ್ನು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ತೀವ್ರವಾಗಿ ಖಂಡಿಸುತ್ತದೆ.ಅಲ್ಲದೇ ರಾಜ್ಯದ ಸಾರಿಗೆ ಸಚಿವರು ದಿನಕ್ಕೊಂದು ರೀತಿಯ ಹೇಳಿಕೆಗಳನ್ನು ಕೊಟ್ಟು, ವಿದ್ಯಾಥರ್ಿಗಳ ಜೊತೆ ಆಟ ಆಡುತ್ತಿದ್ದಾರೆ. ಕಾಲೇಜು ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಸಹ ಇಲ್ಲಿಯವರೆಗೆ ಉಚಿತ ಬಸ್ಪಾಸ್ ಕೊಡುತ್ತೇವೆಂದು ಹೇಳಿಕೊಂಡು ಸುಮ್ಮನೆ ಕಾಲಹರಣ ಮಾಡುತ್ತಿರುವುದಕ್ಕೆ ಖಂಡಿಸಿದರು.

ನಗರ ಕಾರ್ಯದಶರ್ಿ ಸಚೀನ ಬಾಗೇವಾಡಿ ಮಾತನಾಡಿ, ಗ್ರಾಮೀಣ ಭಾಗದ ಬಡ ವಿದ್ಯಾಥರ್ಿಗಳಿಗೆ ಉಚಿತ ಬಸ್ಪಾಸ್ ನೀಡುವುದುಅತಿ ಹೆಚ್ಚು ಶಾಲಾ-ಕಾಲೇಜುಗಳಿಗೆ ಹೋಗಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಉಚಿತ ಬಸ್ಪಾಸ್ ವಿತರಣೆಯಿಂದರಾಜ್ಯ ಸಕರ್ಾರದ ಬೊಕ್ಕಸಕ್ಕೆ ಯಾವುದೇರೀತಿಯ ಹೊರೆಯಾಗುವುದಿಲ್ಲ ಬದಲಿಗೆ ವಿದ್ಯಾಥರ್ಿಗಳನ್ನು ಶಾಲಾ-ಕಾಲೆಜುಗಳಿಗೆ ಹೋಗಲು ಪ್ರೋತ್ಸಾಹ ನೀಡಿದಂತಾಗುತ್ತದೆ. ತಾವು ಈ ವಿಷಯವನ್ನುಗಂಭಿರವಾಗಿ ಪರಿಗಣಿಸಿ ರಾಜ್ಯ ಸಕರ್ಾರದ ಗಮನಸೆಳೆದು ವಿದ್ಯಾಥರ್ಿಗಳಿಗೆ ಅನುಕೂಲ ಮಾಡಿಕೊಡಬೇಕಾಗುತ್ತದೆ. ರಾಜ್ಯದಶಿಕ್ಷಣ, ಹಣಕಾಸು ಮತ್ತು ಸಾರಿಗೆ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಇಲ್ಲಿಯವರೆಗೂ ಯಾವುದೇ ಪತ್ರಿಕ್ರಿಯೆಯನ್ನು ನೀಡಿಲ್ಲ ಎಂದರು.

 ಬಸ್ಪಾಸಗಾಗಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಕಳೆದ ಎರಡು ತಿಂಗಳುಗಳಿಂದ ರಾಜ್ಯದಲ್ಲಿ ನಿರಂತರ ಹೋರಾಟ ಮಾಡುತ್ತಾ ಬಂದರೂ ಸರಕಾರ ವಿದ್ಯಾಥಿಗಳ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.  ಸಕರ್ಾರವು ಕೂಡಲೇ ಎಲ್ಲಾ ವಿದ್ಯಾಥರ್ಿಗಳಿಗೆ ಉಚಿತವಾಗಿ ಬಸ್ಪಾಸ್ ನೀಡಬೇಕೆಂದು ಅವರು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಶಾಂತು ಪಾಸೋಡಿ, ಶ್ರೀಧರ ಕ್ಷತ್ರಿ, ನಾಗೇಶ ಸಿಂಧೆ, ವಿನೋದ ಮನವಡ್ಡರ, ಶ್ರೀಕಾಂತ ಬಿರಾದಾರ, ಪಾಂಡು ಮೋರೆ, ಗೌರಿ ಕಲ್ಲರಗಿ, ಸ್ನೇಹಾ ವಾಲಸಂಗಿ, ಸಹನಾ ಕೋತರ್ಿ, ಕಾವ್ಯಾ ಹೇರಲಗಿ, ದೀಪಾ ಬಂಡಿವಡ್ಡರ, ಅನುಷಾ ಕುಲಕಣರ್ಿ, ಅಂಬಿಕಾ ಮಾಳಗಿ, ಲಕ್ಷ್ಮೀ ಚವ್ಹಾಣ, ಪೂಜಾ ರಾಠೋಡ,  ಇನ್ನಿತರರು ಉಪಸ್ಥಿತರಿದ್ದರು.