ಎಬಿಡಿ ವಿಲಿಯರ್ಸ್ ಆರ್ಸಿಬಿಯ ನೂತನ ನಾಯಕ ?

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ 2019ರ ಐಪಿಎಲ್ ಲೀಗ್ನಲ್ಲಿ ಆರ್ಸಿಬಿ ತಂಡದ ನೂತನ ನಾಯಕರಾಗಿ ತಂಡವನ್ನ ಮುನ್ನಡೆಸುತ್ತಾರೆ ಅಂತಾ ಹೇಳಲಾಗುತ್ತಿದೆ.  

ತಂಡದ ನಾಯಕ ವಿರಾಟ್ ಕೊಹ್ಲಿ ತಂಡವನ್ನ ಗೆಲ್ಲಿಸಿಕೊಡುವಲ್ಲಿ ಪದೇ ಪದೇ ವೈಫಲ್ಯ ಅನುಬವಿಸುತ್ತಿರುವುದರಿಂದ ಆರಸಿಬಿ ಆಡಳಿತ ಮಂಡಳಿ ಎಬಿಡಿ ವಿಲಿಯರ್ಸ್ಗೆ ನಾಯಕನ ಸ್ಥಾನವನ್ನ ಕೊಡಲಿದೆ ಎಂಬ ಮಾತುಗಳು ಕೇಳಿಬಂದಿವೆ. 

ಇತ್ತ ಎಬಿಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಸದ್ಯ ಮಾಝನಿ ಸೂಪರ್ ಲೀಗ್ ಆಡುತ್ತಿದ್ದಾರೆ. ಮುಂದೆ ಐಪಿಎಲ್ ಮೇಲೆ ಕಣ್ಣಿಟ್ಟಿರುವ ಎಬಿಡಿ ವಿಲಿಯರ್ಸ್ ಒಳ್ಳೆಯ ಪ್ರದರ್ಶನ ನೀಡುವುದಾಗಿ ಹೇಳಿದ್ದಾರೆ.