ನವದೆಹಲಿ, ಫೆ 5 ಕಳೆದ ವಾರ ದೆಹಲಿಯ ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ 25 ವರ್ಷದ ಕಪಿಲ್ ಗುಜ್ಜರ್ ಕುಟುಂಬಕ್ಕೆ ಎಎಪಿ ಜೊತೆ ಯಾವುದೆ ರಾಜಕೀಯ ಸಂಬಂಧವಿಲ್ಲ ಕುಟುಂಬ ಸದಸ್ಯರು ಸ್ಪಷ್ಟಪಡಿಸಿದ್ದಾರೆ. ಎಎಪಿ ಜೊತೆ ಸಂಬಂಧವಿದೆ ದೆಹಲಿ ಪೊಲೀಸರ ಹೇಳಿಕೆಯನ್ನೂ ಕುಟುಂಬ ಸದಸ್ಯರು ಕಟ್ಟುಕತೆ ಎಂದೂ ನಿರಾಕರಿಸಿದ್ದಾರೆ.
ದಕ್ಷಿಣ ದೆಹಲಿಯ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟಿಸಿ ನಡೆಸುತ್ತಿರುವ ಹೋರಾಟಗಾರರ ಮೇಲೆ ಶನಿವಾರ ಕಪಿಲ್ ಗುಜ್ಜರ್ ಎಂಬಾತ ಗುಂಡು ಹಾರಿಸಿದ್ದಲ್ಲದೆ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದ. ಕಪಿಲ್ ಎಎಪಿ ಹಿರಿಯ ನಾಯಕ ಸಂಜಯ್ ಸಿಂಗ್ ಹಾಗೂ ಅತಿಶಿ ಅವರೊಂದಿಗೆ ಫೋಟೊದಲ್ಲಿ ಕಾಣಿಸಿಕೊಂಡಿರುವುದನ್ನು ಬಿಟ್ಟರೆ ಕಪಿಲ್ ತಂದೆ ಹಾಗೂ ಸಹೋದರ ದೆಹಲಿಯ ಆಡಳಿತಾರೂಢ ಪಕ್ಷ ಎಎಪಿಯೊಂದಿಗೆ ನಮಗೆ , ಕುಟುಂಬಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಪತ್ರಕರ್ತರ ಮುಂದೆಯೇ ಸ್ಪಷ್ಟಣೆ ನೀಡಿದ್ದಾರೆ.
ರಾಜಕೀಯದಿಂದ ನಮಗೆ ಏನೂ ಆಗಬೇಕಾಗಿಲ್ಲ. ಈ ಬಾರಿ ಬಿಜೆಪಿ ಅಭ್ಯರ್ಥಿ ಪ್ರಚಾರಕ್ಕೆ ಬಂದಿದ್ದರು. ನಾನು ಆ ಅಭ್ಯರ್ಥಿಗೂ ಸಹ ಹಾರ ಹಾಕಿದ್ದೆ. ನಾನು ಎಲ್ಲ ಪಕ್ಷದ ಅಭ್ಯರ್ಥಿಯನ್ನು ಸ್ವಾಗತಿಸುತ್ತೇನೆ ಇದನ್ನೆ ತಪ್ಪಾಗಿ ಭಾವಿಸಿ ಕೊಂಡರೆ ಮಾಡುವುದೇನು ಎಂದು ಕಪಿಲ್ ತಂದೆ ಗಜೇ ಸಿಂಗ್ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.