ಬೆಂಗಳೂರು: ಕಾಂಕ್ರೀಟ್ ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಲಾಲ್ಬಾಗ್ ಸಮೀಪ ನಡೆದಿದೆ.
ಮೃತಳನ್ನು ಪ್ರೀತಿ (19) ಎಂದು ಗುರುತಿಸಲಾಗಿದ್ದು ಇವರು ಸುರಾನ ಕಾಲೇಜ್ ನಲ್ಲಿ ಫ್ರಥಮ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು.
ಅಪಘಾತ ನಡೆದ ವೇಳೆ ಸ್ಕೂಟರ್ ಹಿಂಭಾಗದಲ್ಲಿ ಕುಳಿತಿದ್ದ ಲಾವಣ್ಯ(24) ಅವರಿಗೆ ಗಾಯಗಳಾಗಿದ್ದು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿಸಲಾಗಿದೆ.
ಲಾವಣ್ಯ ಹಾಗು ಪ್ರೀತಿ ಸೋದರಿಯರಾಗಿದ್ದು ಅಪಘಾತದ ತಿವ್ರತೆಗೆ ಸ್ಕೂಟರ್ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಮೃತ ಪ್ರೀತಿಯ ಪೋಷಕರು ಆಕೆ ಕಣ್ಣುಗಳ ದಾನಕ್ಕೆ ಸಮ್ಮತಿ ಸೂಚಿಸುವ ಮೂಲಕ ಸಾವಿನ ದುಃಖದಲ್ಲಿಯೂ ಸಾರ್ಥಕ್ಯತೆ ಮೆರೆದಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ವಿವಿ ಪುರಂ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿ ತನಿಖೆ ಕೈಗೊಂಡಿದ್ದಾರೆ.