ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಲ್ಲ: ಸವಿತಾ ತಿಮ್ಮಣ್ಣವರ್

A woman is not confined to four walls: Savitha Thimmannavar

ರಾಣೇಬೆನ್ನೂರು 10: ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರದೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಇನ್ನಿತರ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಗೌರವಿಸಲು ಹಾಗೂ ಇತರರಿಗೆ ಮಾದರಿಯಾಗಲು ಈ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ ಎಂದು ಬೆಂಗಳೂರಿನ ಅಮೆರೈಸ್ಡ್‌ ಇಂಡಿಯಾ ಪ್ರವೈಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕಿ ಸವಿತಾ ತಿಮ್ಮಣ್ಣವರ ಹೇಳಿದರು.  

ಅವರು, ನಗರ ಹೊರ ವಲಯದ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ , ಮಾತನಾಡಿದರು. ಸಮಾನತೆ, ನ್ಯಾಯ ಹಾಗೂ ಸ್ವಾತಂತ್ರ್ಯದ ಅಚಲವಾದ ಹೋರಾಟದ ಪ್ರತೀಕವಾಗಿ ಈ ದಿನವನ್ನು ಆಚರಿಸ ಲಾಗುತ್ತಿದ್ದು ಮಹಿಳೆಯರು ಇತಿಹಾಸದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಂಡು ಸಮಾನತೆ ಸಾಧಿಸಲು ಮುಂದಾಗಬೇಕು ಎಂದು ಕರೆ ನೀಡಿದರು.  

ಅಧ್ಯಕ್ಷತೆ ವಹಿಸಿದ್ದ  ಮಹಾ ವಿದ್ಯಾಲಯದ ಪ್ರಾಚಾರ್ಯ, ಡಾ.ಎಸ್‌.ಜಿ.ಮಾಕನೂರು ಪ್ರತಿದಿನವೂ ಸಮಾಜದಲ್ಲಿ ಬದಲಾವಣೆ ತರುವ ತಾಯಂದಿರು, ಹೆಣ್ಮಕ್ಕಳು, ಅಕ್ಕತಂಗಿಯರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ ಎಂದು ತಿಳಿಸಿದರು.  

ಮಹಿಳಾ ದಿನಾಚರಣೆ ಅಂಗವಾಗಿ ಏರಿ​‍್ಡಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಪಡೆದ ವಿದ್ಯಾರ್ಥಿನಿಯರಿಗೆ ಬಹುಮಾನ ವಿಚಾರಿಸಲಾಯಿತು ಪ್ರೊ.ಸ್ನೇಹ ಪಾಟೀಲ್  ಅತಿಥಿಗಳನ್ನು ಪರಿಚಸಿಯಿದರು. ಪ್ರೊ. ಸಿ.ಎಂ.ಶ್ವೇತಾ ಸ್ವಾಗತಿಸಿ, ಪ್ರೊ, ಪುಷ್ಪ ತೆಂಬದ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾವನಾ ಪಾಟೀಲ್, ಪ್ರೊ, ಹೆಚ್‌. ಸವಿತಾ  ನಿರೂಪಿಸಿ, ಪ್ರೊ.ಅನುಷಾ ಹಿರೇಮಠ   ವಂದಿಸಿದರು.