ಒಂದು ವಾರ ‘ತ್ರಿವಿಕ್ರಮ’ ಪ್ರೇಮೋತ್ಸವ

ಬೆಂಗಳೂರು, ಫೆ 08, ಫೆಬ್ರವರಿ 14 ಪ್ರೇಮಿಗಳ ದಿನ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ ಒಂದ್ ಲೆಕ್ಕದಲ್ಲಿ ಆ ದಿನ ಲವ್ವರ್ಸ್‌ಗೆ ಹಬ್ಬ  ಟು ವೇ ಲವರ್‌ಗೆ ಔಟಿಂಗ್‌ಗೆ ಹೋಗೋ ಆತುರವಾದ್ರೆ,  ಒನ್‌ ವೇ ಲವರ್‌ಗೆ ಪ್ರೇಮ ನಿವೇದನೆ ಮಾಡೋ ಕಾತರ   ಬ್ರೇಕಪ್‌ ಮಾಡಿಕೊಂಡವರಿಗೆ ‘ಅಂತರ’ದ ಆಗಾಧ ನೋವು  ಅದೆಲ್ಲಾ ಬಿಡಿ, ಒಬ್ಬೊಬ್ಬರದ್ದು ಒಂದೊಂದು ಕಥೆ  ಯಱರಿಗೆ ಏನಂತ ಹೇಳೋದು? ಅವರವರ ಕಥೆ ಅವ್ರೇ ಬರ್ಕೋಬೇಕು. ನಾವ್ ಈಗ ಏನ್‌ ಹೇಳೋಕೆ ಹೊರಟಿದ್ದೀವಿ ಅಂದ್ರೆ ಕೇವಲ ಫೆ 14 ಮಾತ್ರ ಸೆಲಬ್ರೇಷನ್ ಡೇ ಅಲ್ಲ ಅದಕ್ಕೂ ಒಂದು ವಾರ ಮುನ್ನವೇ ಪ್ರೇಮಾಚರಣೆ ಶುರುವಾಗುತ್ತದೆ. ಫೆ.7 ರೋಸ್ ಡೇ, ಫೆ.8 ಪ್ರಪೋಸ್ ಡೇ, ಫೆ.9 ಚಾಕೋಲೇಟ್ ಡೇ, ಫೆ.10 ಟೆಡಿ ಡೇ, ಫೆ.11 ಪ್ರಾಮೀಸ್‌ ಡೇ, ಫೆ.12 ಕಿಸ್ ಡೇ, ಫೆ.13 ಮತ್ತು ಫೆ.14 ವ್ಯಾಲೆಂಟೈನ್‌ ಡೇ.

ಹೀಗಾಗಿ ಒಂದು ವಾರಗಳ ಕಾಲ ಪ್ರೇಮೋತ್ಸವ ನಡೆಯುತ್ತದೆ. ಇದು ಸ್ಯಾಂಡಲ್‌ವುಡ್‌ನ ತ್ರಿವಿಕ್ರಮನಿಗೆ ಚೆನ್ನಾಗಿಯೇ ಗೊತ್ತು. ಹೀಗಾಗಲೇ ಲವ್‌ ಶೂಟಿಂಗ್‌ನಲ್ಲಿರೋ ತ್ರಿವಿಕ್ರಮ ವ್ಯಾಲೆಂಟೈನ್‌ ಡೇ ಆಚರಿಸ್ತಿದ್ದಾನೆ. ಒಂದೊಂದು ದಿನ ಒಂದೊಂದು ಪೋಸ್ಟರ್‌ ಮೂಲಕ ಪ್ರೇಕ್ಷಕರ ಮುಂದೆ ಪ್ರತ್ಯಕ್ಷನಾಗ್ತಿದ್ದಾನೆ. ಪ್ರತಿಯೊಂದು ದಿನವೂ ವಿಭಿನ್ನವಾದ ಪೋಸ್ಟರ್‌ ರಿಲೀಸ್ ಮಾಡೋ ಮೂಲಕ ಲವ್‌ ಉತ್ಸವ ಆಚರಿಸ್ತಿದ್ದಾನೆ ತ್ರಿವಿಕ್ರಮ. ಈ ಪೋಸ್ಟರ್‌ನಲ್ಲಿ ನಾಯಕ ವಿಕ್ರಮ್‌, ನಾಯಕಿ  ಆಕಾಂಕ್ಷ ಶರ್ಮಾ ಮತ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣ ಇದ್ದಾರೆ. ಚಿತ್ರೀಕರಣ ಹಂತದಲ್ಲಿರೋ ತ್ರಿವಿಕ್ರಮ ಚಿತ್ರಕ್ಕೆ ಸಹನಾ ಮೂರ್ತಿ ಆ್ಯಕ್ಷನ್‌ ಕಟ್ ಹೇಳ್ತಿದ್ದಾರೆ. ಸೋಮಣ್ಣ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.