ಕ್ಷೇತ್ರದ ಜನರ ಸಮಸ್ಯೆಗಳಿಗೆ ದನಿಯಾಗುವೆ : ಶಾಸಕ ತಮ್ಮಣ್ಣವರ
ಹಾರೂಗೇರಿ 15 : ಕುಡಚಿ ಮತಕ್ಷೇತ್ರಕ್ಕೆ ಕಳೆದ 2 ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಹಂತಹಂತವಾಗಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಕ್ಷೇತ್ರದ ಜನರ ನೋವಿಗೆ ದನಿಯಾಗುವುದಾಗಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಹತ್ತಿರ ಹಾಲುಮತ ಸಮಾಜದ ಸ್ಮಶಾನ ಭೂಮಿಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಫೇವರ್ ಬ್ಲಾಕ್ ಅಳವಡಿಕೆ ಮತ್ತು ಪುರಸಭೆ ವ್ಯಾಪ್ತಿಯ ವಾರ್ಡನಂ 12 ರಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಕುಡಚಿ ಕ್ಷೇತ್ರದ ಜನ ಜನಸೇವೆ ಮಾಡಲು ನನಗೆ ಅಧಿಕಾರ ನೀಡಿದ್ದಾರೆ. ಪ್ರಾಮಾಣಿಕವಾಗಿ ಅವರ ಸೇವೆ ಮಾಡಿವುದು ನನ್ನ ಧ್ಯೇಯವಾಗಿದೆ. ಕುಡಚಿ ಮತಕ್ಷೇತ್ರದಾಧ್ಯಂತ ಉತ್ತಮವಾದ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ವಸತಿ ರಹಿತರಿಗೆ ನಿವೇಶ ಮಂಜೂರು ಮಾಡಿಸುವುದು ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಕ್ಷೇತ್ರದ ಜನರ ನೀರೀಕ್ಷೆಗೆ ಕಿಂಚಿತ್ತೂ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ಸರ್ಕಾರದಿಂದ ಕುಡಚಿ ಮತಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ರಸ್ತೆ, ಸಾರ್ವಜನಿಕರ ಮೂಲಭೂತ ಸೌಲಭ್ಯ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಕುಡಚಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಪುರಸಭೆ ಅಧ್ಯಕ್ಷ ವಸಂತ ಲಾಳಿ, ಎನ್.ಎಸ್.ಚೌಗಲಾ, ಬಿ.ಬಿ.ಮುಗಳಿಹಾಳ, ತಮ್ಮಣ್ಣಿ ಕುರಿ, ಮುತ್ತಪ್ಪ ಗಸ್ತಿ, ಬಾಬುರಾವ ನಡೋಣಿ, ಭರತೇಶ ದರೂರ, ರವಿ ಕರೋಶಿ, ಪರಮಾನಂದ ಗಲಗಲಿ, ಸಚೀನ ಹಳಕಲ್ಲ, ಕಲ್ಮೇಶ ಕಾಂಬಳೆ, ಪ್ರಕಾಶ ಕುರಿ, ಶಶಿಧರ ಶಿಂಗೆ, ಮಾಳು ಹಾಡಕಾರ, ಮಹಾಂತೇಶ ವಗ್ಗಿ, ಬಸವರಾಜ ಚೌಗಲಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು.