ಲೋಕದರ್ಶನ ವರದಿ
ಕೊಪ್ಪಳ ಜ.18: ತಾಲೂಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರ ಸ್ಥಾನಕ್ಕೆ ಇತ್ತೀಚಿಗೆ ಚುನಾವಣೆ ಜರುಗಿ ಸದಸ್ಯರುಗಳು ಆಯ್ಕೆಗೊಂಡ ಬಳಿಕ 12 ಜನ ಸದಸ್ಯರ ಬಲ ಹೊಂದಿರುವ ಸದಸ್ಯರದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಜರುಗಿ 02 ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಿಕೊಳ್ಳಲಾಯಿತು.
ತಾಲೂಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ರಾಜಶೇಖರಗೌಡ ಅಡೂರು ಹಾಗೂ ಉಪಾಧ್ಯಕ್ಷರಾಗಿ ಮರ್ಧಾನ ಅಲಿ ಮುಜಾವರ (ಮುನ್ನಾ) ರವರು ಅವರೋಧ ಆಯ್ಕೆಗೊಂಡಿದ್ದಾರೆ. ಸಹಕಾರಿ ಸಂಘಗಳ ಇಲಾಖಾಧಿಕಾರಿ ವೆಂಕರೆಡ್ಡಿ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಿಸಿದ್ದಾರೆ. ಸಂಘದ ಕಾರ್ಯದರ್ಶಿ ರುದ್ರಯ್ಯ ಹಿರೇಮಠ ಸೇರಿದಂತೆ ಸಂಘದ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.