ವೀರ ಯೋಧರಿಗೆ ಸನ್ಮಾನ

ಹಾವೇರಿ: ತಾಲ್ಲೂಕಿನ ಕಾಟೇನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ನಡೆದ 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಇತ್ತೀಚೆಗೆ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಭಾರತ ಮಾತೆಯ ಹೆಮ್ಮೆಯ ಪುತ್ರರಾದ ರಾಜು ಗುತ್ತಲ ಮತ್ತು ಹೇಮಂತ ಹೊಟ್ಟೆಪ್ಪನವರ ಅವರಿಗೆ ಗ್ರಾಮ ಪಂಚಾಯ್ತಿ ಪರವಾಗಿ ಮತ್ತು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.  

         ಇದೇ ವೇಳೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಮುದ್ದಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಅಂಗರಗಟ್ಟಿ,  ಉಪಾಧ್ಯಕ್ಷ ಚನ್ನಬಸಪ್ಪ ಕಳ್ಳಿಹಾಳ ಹಾಗೂ ಗ್ರಾಮದ ಮುಖಂಡರಾದ ಹೊನ್ನಪ್ಪ ಎಲಿಗಾರ, ವೀರಭದ್ರಪ್ಪ ಗೋಣೆಮ್ಮನವರ, ಶಿವಪ್ಪ ದೊಡ್ಡಕುರುಬರ, ಬಸವರಾಜ ಬಾಲಕ್ಕನವರ, ಲತಾ ಬಂಕಾಪುರ, ಶೇಖಪ್ಪ ಕರಲಿಂಗಣ್ಣವರ ಹಾಗೂ ಶಿಕ್ಷಕರು, ಗ್ರಾಮಸ್ಥರು, ದೇಶ ಭಕ್ತ ಯುವಕರ ಬಳಗ ಹಾಗೂ ಮಕ್ಕಳು  ಉಪಸ್ಥಿತರಿದ್ದರು.