ಜನರಿಗೆ ಪ್ರತಿದಿನ 10 ಸಾವಿರ ಲೀಟರ ಹಾಲು ಕೊಡುವ ವ್ಯವಸ್ಥೆ

ಲೋಕದರ್ಶನ ವರದಿ

ಚಿಕ್ಕೋಡಿ ಜುಲೈ 13: ಕೊರೊನಾ ಮುಂಜಾಗೃತವಾಗಿ ಚಿಕ್ಕೋಡಿ ನಗರವನ್ನು ಒಂದು ವಾರಗಳ ಕಾಲ ಲಾಕಡೌನ್ ಮಾಡಿರುವ ಪರಿಣಾಮ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಮಾರ್ಗದರ್ಶನದಲ್ಲಿ ಒಂದು ವಾರ ಉಚಿತ ಹಾಲಿನ ಪಾಕೇಟ ನೀಡಲು ನಿರ್ಧರಿಸಲಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.

ಸೋಮವಾರ ಚಿಕ್ಕೋಡಿ ನಗರದ ಇಂದಿರಾ ನಗರದಲ್ಲಿ ಸಾರ್ವಜನಿಕರಿಗೆ ಹಾಲಿನ ಪಾಕೇಟ ವಿತರಿಸಿದ ಬಳಿಕ ಮಾತನಾಡಿದ ಅವರು, ನಗರದ 23 ವಾರ್ಡದ ಜನರಿಗೆ ಪ್ರತಿದಿನ 10 ಸಾವಿರ ಲೀಟರ ಹಾಲು ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಹಿಂದೆ ಲಾಕಡೌನ್ ಇದ್ದ ಸಮಯದಲ್ಲಿ ಇಡೀ ಕ್ಷೇತ್ರದ ಜನರಿಗೆ ದಿನಸಿ ಕಿಟ್ ಹಾಗೂ ಜೋಳದ ಕಿಟ್ ನೀಡಿ ಜನರಿಗೆ ಸಹಾಯ ಸಹಕಾರ ಮಾಡಲಾಗಿತ್ತು. ಈಗಲು ಪ್ರಕಾಶ ಹುಕ್ಕೇರಿ ಅವರು ಜನರ ಸಹಾಯ ಮಾಡಬೇಕು ಎಂದು ಹೇಳಿದಾಗ ಚಿಕ್ಕೋಡಿ ನಗರದ ಜನರಿಗೆ ಹಾಲಿನ ಪಾಕೇಟ ನೀಡಲಾಗುತ್ತದೆ. ಲಾಕಡೌನ್ ಮುಂದುವರೆದರೇ ಮತ್ತೆ ದಿನಸಿ ಕಿಟ್ ನೀಡಲು ಕ್ರಮ ಜರುಗಿಸಲಾಗುತ್ತದೆ ಎಂದರು.

ಪುರಸಭೆ ಸದಸ್ಯ ರಾಮಾ ಮಾನೆ ಮಾತನಾಡಿ, ಚಿಕ್ಕೋಡಿ ಸುತ್ತಮುತ್ತಲಿನ ತಾಲೂಕುಗಳಲ್ಲಿ ಕೊರೊನಾ ಹರಡುತ್ತಿದೆ. ಇಲ್ಲಿಯ ಜನರಿಗೆ ಹರಡದಂತೆ ಮುಂಜಾಗೃತವಾಗಿ ಲಾಕಡೌನ್ ಮಾಡಲಾಗುತ್ತದೆ. ಯಾರ ವಿರುದ್ಧ ಟೀಕೆ ಮಾಡದೇ ಲಾಕಡೌನ್ಗೆ ಬೆಂಬಲ ನೀಡಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ನರೇಂದ್ರ ಬೇಲರ್ೆಕರ, ಪುರಸಭೆ ಸದಸ್ಯ ಸಾಭೀರ ಜಮಾದಾರ, ಗುಲಾಬ ಬಾಗವಾನ, ಅನಿಲ ಮಾನೆ, ಮುದ್ದಸರ ಜಮಾದಾರ, ಗಣೇಶ ಮೋಹಿತೆ, ಪೀರೋಜ ಕಲಾವಂತ, ಬಾಬು ಸಮ್ಮತ್ತಶೇಟ್ಟಿ ಮುಂತಾದವರು ಇದ್ದರು.