ಮಕ್ಕಳಿಗೆ ವಿಶೇಷ ಬೋಧನಾ ಕಾರ್ಯಕ್ರಮ ಅವಶ್ಯಕ: ಜಿಲ್ಲಾ ನಿರ್ದೇಶಕ ಶಿವಾನಂದ

ಲೋಕದರ್ಶನ ವರದಿ

ಶಿರಹಟ್ಟಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ಗುಣಮಟ್ಟದ ಕಲಿಕೆಗೆ ಪ್ರೋತ್ಸಾಹ ನೀಡುವುದು ಪಾಲಕರ ಹಾಗೂ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ ಕರೆ ನೀಡಿದರು.

ಅವರು ಪಟ್ಟಣದ ಮ್ಯಾಗೇರಿಯ ಪ್ರೌಢ ಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ವಿಶೇಷ ಭೋದನೆಗೆ ಚಾಲನೆ ನೀಡಿ ಮಾತನಾಡುತ್ತಾ, ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಎಸ್.ಎಸ್.ಎಲ್.ಸಿ. ಅಂಕ ಅತ್ಯಂತ ಮಹತ್ವವಾಗಿದೆ. ಮಕ್ಕಳ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಧರ್ಮಸ್ಥಳ ಸಂಸ್ಥೆಯಿಂದ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ವಿಶೇಷ ಭೋದನೆ ನಡೆಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಶೇ.100 ರಷ್ಟು ಅಂಕ ತೆಗೆದು ಶಾಲೆಗೆ, ಊರಿಗೆ ಮತ್ತು ತಂದೆ ತಾಯಿಗೆ ಗೌರವ ತರಬೇಕು ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಈ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನಂತರ ಧರ್ಮಸ್ಥಳ ಯೋಜನೆಯ ತಾಲೂಕು ಯೋಜನಾಧಿಕಾರಿ ಶಿವಣ್ಣ ಎಸ್. ಮಾತನಾಡಿ, ಶಿರಹಟ್ಟಿ ತಾಲೂಕಿನಲ್ಲಿ 5 ಪ್ರೌಢ ಶಾಲೆಗಳನ್ನು ನಮ್ಮ ಯೋಜನೆಯಿಂದ ವಿಶೇಷ ಭೋದನೆಗೆ ಆಯ್ಕೆ ಮಾಡಿದ್ದು ನುರಿತ ಇಂಗ್ಲೀಷ್ ವಿಷಯದಲ್ಲಿ ಬಿ.ಎ. ಬಿ.ಇಡ್ ಆದ ಖಾಸಗಿ ಶಿಕ್ಷಕರಿಂದ ವಾರದಲ್ಲಿ 3 ದಿನ ವಿಶೇಷ ಭೋದನೆ ನಡೆಸಲಾಗುತ್ತಿದೆ. ಮುಂದೆ ಬರುವ ಪಬ್ಲಿಕ್ ಪರೀಕ್ಷೆವರೆಗೂ ಈ ವಿಶೇಷ ತರಬೇತಿ ನಡೆಸಲಾಗುತ್ತಿದೆ ಈ ವಿಶೇಷ ಬೋಧನೆ ಮಾಡುವ ಶಿಕ್ಷಕರಿಗೆ ಸಂಸ್ಥೆಯಿಂದ ಗೌರವಧನ ನೀಡಲಾಗುತ್ತದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ವಿ.ಎಸ್ ಶೆಠವಾಜಿ, ಇಂಗ್ಲೀಷ್ ಭಾಷಾ ಬೋಧಕ ಗಣಪತಿ ಈರಕ್ಕನವರ, ಕನ್ನಡ ಭಾಷಾ ಶಿಕ್ಷಕ ಪಿ.ವ್ಹಿ ಹಿರೇಮಠ, ಶಾಲಾ ಸುಧಾರಣೆಯ ಹಿರಿಯರಾದ ನಿವೃತ್ತ ಪ್ರಾದ್ಯಾಪಕ ಎಚ್ ಎಂ. ದೇವಗಿರಿ, ಸಹಶಿಕ್ಷಕರು ಮತ್ತು ಎಸ್.ಎಸ್.ಎಲ್.ಸಿ. ವಿದ್ಯಾಥರ್ಿಗಳು ಪೋಷಕರು ಭಾಗವಹಿಸಿದ್ದರು,  ಗ್ರಾಮಾಭಿವೃದ್ಧಿ ಸಂಸ್ಥೆಯ ಜ್ಯೋತಿ ಗುಡಿ ನಿರೂಪಿಸಿ ವಂದಿಸಿದರು.