ಕುರುಗೋಡು04: ಕೊರೋನಾ ವೈರಸ್ ಭೀತಿಯಿಂದ ದೇಶವೇ ಲಾಕ್ ಡೌನ್ನ ಹಿನ್ನೆಲೆಯಲ್ಲಿ ಅಂದಾಜು 42 ದಿನ ಮದ್ಯದಂಗಡಿಗಳಿಲ್ಲದೆ ಕಂಗಾಲಾಗಿದ್ದ ಮದ್ಯಪ್ರಿಯರಿಗೆ ಇಂದಿನಿಂದ ಮದ್ಯದಂಗಡಿಗಳನ್ನು ತರೆದಿದ್ದು ಸ್ವರ್ಗವೇ ಸಿಕ್ಕಂತಾಗಿದೆ. ಬೆಳಿಗ್ಗೆಯಿಂದ ಕುರುಗೋಡು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮದ್ಯಪ್ರಿಯರು ಸಾಲು ನಿಂತು ಮದ್ಯ ಖರಿಧಿಸುವ ದೃಶ್ಯ ನಾನಾ ಕಡೆ ಕಂಡುಬಂತು.
ಮದ್ಯಪ್ರಿಯರಿಗೆ ಮದ್ಯದೆಂಗಡಿ ತೆರಿದಿರುವ ಸಂತಸ ಒಂದೆಡೆ ಆದರೆ ಅಂಗಡಿಯವರು ಒಬ್ಬರಿಗೆ ಎರಡು ಬಾಟಲ್ ಕೊಡುವದರಿಂದ ತುಸು ಬೇಜಾರಾಗಿದ್ದಾರೆ. ಇನ್ನೂ ಬಾಟಲ್ಗಳು ಕೊಟ್ಟರೆ ಮತ್ತೆ ಮತ್ತೆ ಅಂಗಡಿಗೆ ಬರದೇ ಮನೆಯಲ್ಲಿರುತ್ತೇವೆ ಎಂಬ ಮಾತುಗಳು ವಅುದ್ಯಪ್ರಿಯರಿಂದ ಕೇಳಿಬಂದವು.
ಬೆಳಿಗ್ಗೆ ಮದ್ಯ ಖರೀದಿಸಲು ಅಂಗಡಿ ಮುಂದೆ ಮದ್ಯಪ್ರಿಯರು ಗುಂಪು ಗುಂಪಾಗಿ ಸರತಿ ನಿಂತು ನಾ ಮುಂದು ನೀ ಮುಂದು ಎನ್ನುವ ನೂಕುನುಗ್ಗಲಿನಿಂದ ಜನಜಂಗುಳಿ ತುಂಬಿತ್ತು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ, ಮಾಸ್ಕ್ ಇಲ್ಲದೆ ಬಾಟಲ್ ಖರೀದಿಸಲು ಬಂದಿರುವವರಿಗೆ ಹಿಂದಕ್ಕೆ ಕಳುಹಿಸಿದರು ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು, ಸ್ಯಾನಿಟೈಜರ್ ಉಪಯೋಗಿಸಬೇಕು ಹಾಗೂ ಇನ್ನಿತರ ವೈರಸ್ ಜಾಗೃತಿ ಕುರಿತು ಸಲಹೆ ನೀಡಿದರು.