ವಿಜಯಪುರ 04: ಮಾದಕ ವಸ್ತುಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಜಾಲವನ್ನು ಪತ್ತೆ ಹಚ್ಚಿ ಶಿಸ್ತು ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿಯ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟ್ ಕದಿಂದ ಮಾನ್ಯ ಪೊಲೀಸ್ ವರಿಷ್ಟಧಿಕಾರಿಗಳಿಗೆ ಮನವಿ.
ಜಿಲ್ಲೆಯಲ್ಲಿ ಹೆಚ್ಚುತಿರುವ ಮಾದಕ ವಸ್ತುಗಳು ಮಾರಾಟವನ್ನು ತಡೆಗಟ್ಟಬೇಕು ಇದರಿಂದ ಜಿಲ್ಲೆಯ ಯುವ ಜನಾಂಗ ಹೀನಾಯ ಸ್ಥಿತಿಗೆ ತಲಪುವ ಸಾಧ್ಯತೆ ಹೆಚ್ಚಾಗಿದೆ ಮತ್ತು ಪೋಷಕರಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಕೂಡಲೇ ಪೊಲೀಸ್ ಇಲಾಖೆ ತಕ್ಷಣವೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ರಾಜ್ಯ ವ್ಯಾಪ್ತಿ ಉಗ್ರ ಹೋರಾಟ ಅನಿವಾರ್ಯ ಎಂದು ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟ್ ಕ ರಾಜ್ಯ ಸಂಚಾಲಕ ವಿಜಯಕುಮಾರ ಕುಡುಗಿನೂರ ಹೇಳಿದರು.
ಜಿಲ್ಲಾ ಸಂಚಾಲಕರಾದ ಭರತ ಕುಲಕರ್ಣಿ ಮಾತನಾಡಿ ಜಿಲ್ಲೆಯ ನದಿ ತೀರದಲ್ಲಿ ಅತೀ ಹೆಚ್ಚು ಗಾಂಜಾ ಪದಾರ್ಥ ದೊರಕುತಿದ್ದು ಇದರಿಂದ ಗ್ರಾಮೀಣ ಭಾಗದ ಯುವಕರು ದುಷ್ಟಚಟಕ್ಕೆ ತುತ್ತಗುತ್ತಿದ್ದು ತುಂಬಾ ನೋವಿನ ಸಂಗತಿ ಇದರಿಂದ ಬಡ ಕೂಲಿ ಕಾರ್ಮಿಕ ಪೋಷಕರಿಗೆ ಆರ್ಥಿಕತೆ ಅಭದ್ರವಾಗಲಿದೆ ತಕ್ಷಣ ಅಂತ ವೆಕ್ತಿ ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.
ವಿಜಯಪುರ ನಗರ ಮಂಡಲದ ಅಧ್ಯಕ್ಷರಾದ ಶಂಕರ್ ಹೂಗಾರ್, ಸಹ ಸಂಚಾಲಕ ಶ್ರೀಕಾಂತ ದೇವರ ಮತ್ತು ಖಅ ಮೋರ್ಚಾ ಅಧ್ಯಕ್ಷ ಮಿಶಿಯವರು ಮಾತನಾಡಿದರು ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಭಾರತಿ ಭೂಯ್ಯರ, ಭೀಮನಗೌಡ ಪಾಟೀಲ, ಕುಮಾರ್ ಪಾಟೀಲ ನಗರ ಸಂಯೋಜಕ ಅರವಿಂದ ಲಮಾಣಿ ನಗರ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.