ಬಸ್ಸಿನ ಸೌಲಭ್ಯಕ್ಕಾಗಿ ಜುಗೂಳ ಗ್ರಾಮಸ್ಥರಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಜು ಕಾಗೆಗೆ ಮನವಿ

ಜುಗೂಳ ಗ್ರಾಮಸ್ಥರು ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಶಾಸಕ ರಾಜು ಕಾಗೆ ಅವರಿಗೆ ಮನವಿ ಸಲ್ಲಿಸುತ್ತಿರುವ ಚಿತ್ರ.

ಬಸ್ಸಿನ ಸೌಲಭ್ಯಕ್ಕಾಗಿ ಜುಗೂಳ ಗ್ರಾಮಸ್ಥರಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಜು ಕಾಗೆಗೆ ಮನವಿ 

ಕಾಗವಾಡ 25 : ತಾಲೂಕಿನ ಜುಗೂಳ ಗ್ರಾಮದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಬಸ್ಸಿನ ಸೌಲಭ್ಯ ಇಲ್ಲದಿರುವುದರಿಂದ ಕೂಡಲೇ ಗ್ರಾಮಕ್ಕೆ ಬಸ್‌ಗಳನ್ನು ಬಿಡಿಸಬೇಕೆಂದು ಜುಗೂಳ ಗ್ರಾಮಸ್ಥರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ರಾಜು ಕಾಗೆ ಅವರಿಗೆ ಮನವಿ ಸಲ್ಲಿಸಿದರು. 

ಮನವಿ ಸ್ವೀಕರಿಸಿದ ರಾಜು ಕಾಗೆ ಸ್ಥಳದಲ್ಲಿಯೇ ರಸ್ತೆ ನಿಗಮದ ಅಧಿಕಾರಿಗಳಿಗೆ ಫೋನ್ ಮುಖಾಂತರ ಮಾತನಾಡಿ, ಜುಗೂಳ ಗ್ರಾಮಕ್ಕೆ ಸಮರ​‍್ಕ ಬಸ್ ಸೇವೆ ಮತ್ತು ವಸತಿ ಬಸ್‌ಗಳನ್ನು ಬಿಡಬೇಕೆಂದು ಸೂಚಿಸಿದರು.  

ರವಿವಾರ ದಿ. 24 ರಂದು ಸವಳು-ಜವಳು ಯೋಜನೆಯ ಕಾಮಗಾರಿಗೆ ಚಾಲನೆಯ ವೇಳೆ ಗ್ರಾಮದ ಅಭಯ ಶಹಾ ಈ ಕುರಿತು ಮನವಿ ಸಲ್ಲಿಸಿದ್ದರು. ಅದಕ್ಕೆ ಅವರು ಅಲ್ಲಿಯೇ ಪರಿಹಾರ ನೀಡಿ, ಬಸ್ ಸೇವೆ ಒದಗಿಸುವ ಭರಸವೆ ನೀಡಿದರು.ಈ ಸಮಯದಲ್ಲಿ ಮುಖಂಡರಾದ ಅಣ್ಣಾಸಾಬ ಪಾಟೀಲ, ಕಾಕಾಸಾಬ ಪಾಟೀಲ, ಉಮೇಶ ಪಾಟೀಲ, ರಾಜು ಕಡೋಲೆ, ಅನೀಲ ಕಡೋಲೆ, ಸುರೇಶ ಪಾಟೀಲ, ಬಾಬಾಸಾಬ ತಾರದಾಳೆ ಅವಿನಾಶ ಪಾಟೀಲ, ನೀತೀನ ಪಾಟೀಲ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  

 ಜುಗೂಳ ಗ್ರಾಮಸ್ಥರು ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಶಾಸಕ ರಾಜು ಕಾಗೆ ಅವರಿಗೆ ಮನವಿ ಸಲ್ಲಿಸುತ್ತಿರುವ ಚಿತ್ರ.