ಮುಗಳಖೋಡ : ಪಟ್ಟಣದ ಪುರಸಭೆ ಕಾಯರ್ಾಲಯದಲ್ಲಿ ಅಟಲ್ಜೀ ಸೇವಾ ಕೇಂದ್ರದಲ್ಲಿ (ನೆಮ್ಮದಿ ಕೇಂದ್ರ) ಪ್ರಾರಂಭವಾಗಿ ಸುಮಾರು 4 ರಿಂದ 5 ವರ್ಷ ಕಳೆದರು ಇಲ್ಲಿ ಬಂದಂತಹ ಜನರಿಗೆ ನೆರಳಿಲ್ಲಾ ಮಳೆಗಾಲದಲ್ಲಿ ಸಹ ಸರತಿ ಸಾಲಿನಲ್ಲಿ ನಿಂತು ಪಹಣಿಪತ್ರ, ಆಧಾಯ ಮತ್ತು ಜಾತಿ ಪ್ರಮಾಣ ಪತ್ರ ತಗೆದುಕೊಳ್ಳಲು ಮುಗಳಖೋಡ, ಪಾಲಭಾವಿ, ಸುಲ್ತಾನಪೂರ, ಹಂದಿಗುಂದ, ಕಪ್ಪಲಗುದ್ದಿ, ಮರಾಕೋಡಿ, ಖನದಾಳ, ಇಟ್ನಾಳ ಇನ್ನೀತರ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ತಮ್ಮ ಕೆಲಸಕ್ಕೆ ಈ ಸರತಿ ಸಾಲಿನಲ್ಲಿ ನಿಂತು ಮಳೆ ಹಾಗೂ ಬಿಸಿಲಿನಲ್ಲಿ ನಿಂತು ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ ಶಪಿಸುತ್ತಿರುವುದು ಸವರ್ೆಸಾಮಾನ್ಯವಾಗಿದೆ. ಇಲ್ಲಿಯ ಪುರಸಭೆ ಅಧ್ಯಕ್ಷರು, ಸದಸ್ಯರು ಇದನ್ನು ನೋಡಿ ನೋಡದವರಂತ್ತೆ ವತರ್ಿಸುತಿದ್ದಾರೆ. ಆದರೆ ಮುಖ್ಯಾಧಿಕಾರಿಯ ತಮ್ಮ ವಾಹನ ನಿಲುಗಡೆಗೆ ನೆರಳನ್ನು ಮಾಡಿಕೊಂಡಿದ್ದಾರೆ. ಆದರೆ ಜನರಿಗೆ ಯಾವುದೇ ತರಹದ ವ್ಯವಸ್ಥೆಯು ಇರುವುದಿಲ್ಲ. ಇದರಿಂದ ಜನರಿಗೆ ಮುಕ್ತಿಬೇಕಾಗಿದೆ.
ಈ ಕಾಮಗಾರಿಗೆ ಪುರಸಭೆವತಿಯಿಂದ ಮೂರು ಲಕ್ಷ ರೂಪಾಯಿ ತಗೆದಿಟ್ಟು ಟೆಂಡರ್ ಕರೆದು ಕೆಲಸವನ್ನು ಪ್ರಾರಂಬ ಮಾಡಿ ಮೂರು ತಿಂಗಳೋಳಗಾಗಿ ಜನರಿಗೆ ಅನುಕೂಲಮಾಡಿಕೊಡುತ್ತೆವೆಂದು ತಿಳಿಸಿದರು.