ಜನ ಮೆಚ್ಚುಗೆ ಪಡೆದ ಸಾಂಸ್ಕೃತಿಕ ವೈಭವ ನೃತ್ಯ ರೂಪಕ

ಲೋಕದರ್ಶನ ವರದಿ

ಕೊಪ್ಪಳ 09: ಕಲಬುಗರ್ಿಯ ಅಂಬೇಡ್ಕರ್ ಸಭಾಭವನದಲ್ಲಿ ಶುಕ್ರವಾರ ದಿ. 7ರಂದು ಸಂಜೆ 7.10 ರಿಂದ 7.30 ವರೆಗೆ ನಡೆದ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯಿಂದ ಸಮ್ಮೇಳನದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈಭವದ ನೃತ್ಯ ರೂಪಕವನ್ನು ವೇದಿಕೆಯ ಕಲಾವಿದರು ಪ್ರಸುತ್ತ ಪಡಿಸಿದರು.

ಸಾಂಸ್ಕೃತಿಕ ವೈಭವದ ನೃತ್ಯ ರೂಪಕದಲ್ಲಿ ಒಟ್ಟು 35ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ವೈವಿದ್ಯಮಯ ನೃತ್ಯವನ್ನ ಪ್ರದಶರ್ಿಸಿದರು. ಕೊಪ್ಪಳ ನಾಗರಿಕರ ವೇದಿಕೆಯಿಂದ ಈಗಗಾಲೇ ವಿಜಯಪುರು, ಬೆಂಗಳೂರು, ಹಾಸನ, ರಾಯಚೂರು, ಮೈಸೂರು ಹಾಗೂ ಧಾರವಾಡಗಳಲ್ಲಿ ಜರುಗಿದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ನೃತ್ಯ ಪ್ರದರ್ಶನವನ್ನು ನೀಡಿದೆ. ಅಲ್ಲದೇ ಗೋವಾದಲ್ಲಿ ನಡೆದ ಹೊರನಾಡ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ, ಮಂತ್ರಾಲಯದಲ್ಲಿ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ, ಕಾಶಿಯಲ್ಲಿ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ, ಪಾಂಡಿಚೇರಿಯಲ್ಲಿ  ಕನ್ನಡ ರಾಜ್ಯೋತ್ಸವ, ವಿಜಯನಗರ ಸಾಂಸ್ಕೃತಿಕ ವೈಭವ, ಆನೆಗೊಂದಿ ಉತ್ಸವ, ಕನಕಗಿರಿ ಉತ್ಸವ, ಹಂಪಿ ಉತ್ಸವ, ಉತ್ತರ ಕನರ್ಾಟಕ ಉತ್ಸವ, ಇಟಗಿ ಉತ್ಸವ, ಕೊಪ್ಪಳ ಜಿಲ್ಲಾ ಉತ್ಸವ, ಹೈಕ ಉತ್ಸವ, ಮಂಡ್ಯದಲ್ಲಿ ಮಕ್ಕಳ ಸಾಂಸ್ಕೃತಿಕ ಸಮ್ಮೇಳನ, ಕನ್ನಡ ಮತ್ತು ಇಲಾಖೆಯ ಸುಗ್ಗಿ-ಹುಗ್ಗಿ, ಜನಪದ ಜಾತ್ರೆ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಪತ್ರಿಕಾ ದಿನಾಚರಣೆ, ಶಿಕ್ಷಕರ ದಿನಾಚರಣೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದಶರ್ಿಸಿ ಜನ ಮಚ್ಚಿಗೆ ಪಡೆದಿದೆ.