ಗುಳೇದಗುಡ್ಡ09: ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಅಡಗಿರುತ್ತದೆ. ಅದರ ಅನಾವರಣಕ್ಕೆ ವೇದಿಕೆ ಬೇಕು. ಅಂತಹ ವೇದಿಕೆಗಳು ಅವರಿಗೆ ಶಾಲಾ ವಾಷರ್ಿಕೋತ್ಸವದಲ್ಲಿ ಸಿಗುತ್ತವೆ ಎಂದು ಬಸವನ ಬಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು.
ಅವರು ಶನಿವಾರ ಇಲ್ಲಿನ ನೆಹರು ಇಂಟರ್ ನ್ಯಾಷನಲ್ ಶಾಲೆಯ ವಾಷರ್ಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಬಾಲ್ಯದಿಂದಲೇ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಸಿಗಬೇಕು. ನಂತರ ಶಾಲೆಗಳ ಇಂತಹ ವೇದಿಕೆಗಳು ಸಹಕಾರಿಯಾಗುತ್ತವೆ. ಇಂದಿನ ಮಕ್ಕಳಲ್ಲಿ ದೇಶದ ಭವಿಷ್ಯವೇ ಅಡಗಿದೆ. ಮಕ್ಕಳಿಗೆ ಜೀವನ ಶಿಕ್ಷಣದ ಅಗತ್ಯವಿದೆ. ಅವರಿಗೆ ಅಧ್ಯಯನದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೂ ಶಾಲೆಗಳು ಪ್ರೋತ್ಸಾಹ ನೀಡಬೇಕೆಂದರು.
ಜಿಲ್ಲಾ ಎಸ್ಪಿ ಲೋಕೇಶ್ ಜಗಲಸಕರ್, ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಸಹಾಯಕ ನಿದರ್ೇಶಕ ಶ್ರೀಶೈಲ್ ಕಂಕಣವಾಡಿ, ಚಲನಚಿತ್ರ ನಟಿ ಅನಿತಾಭಟ್, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹೊಳಬಸು ಶೆಟ್ಟರ್ ಮಾತನಾಡಿದರು. ಮಾಜಿ ಸಚಿವ ಹೆಚ್.ವೈ.ಮೇಟಿ ಅಧ್ಯಕ್ಷತೆವಹಿಸಿ ಮಾತನಾಡಿರು. ಅಧ್ಯಕ್ಷ ಎಂ.ಎಸ್. ಸರ್ಗಣಾಚಾರ್, ಉಪಾಧ್ಯಕ್ಷ ವಿರೇಶ್ ಚಿಂದಿ, ಪ್ರಾಚಾರ್ಯ ಸಾಯಿ ಕೃಷ್ಣ ಹಾಗೂ ಇತರರು ಇದ್ದರು.