ಮುಂಡಗೋಡ, 02; ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹುಲ್ಲಿನ ಪೆಂಡಿಗಳ ಸುಟ್ಟು ಹೋದ ಘಟನೆ ಶನಿವಾರ ಸನವಳ್ಳಿ ಗ್ರಾಮದಲ್ಲಿ ನಡೆದಿದೆ. ಸನವಳ್ಳಿ ಗ್ರಾಮದ ನಾಗರಾಜ ಗುಬ್ಬಕ್ಕನವರ ಎಂಬವರ ಮನೆಯ ಹಿತ್ತಲಿನಲ್ಲಿ ನಾಲ್ಕು ನೂರು ಭತ್ತದ ಹುಲ್ಲಿನ ಪೆಂಡಿಗಳ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಅಪಾರ ಪ್ರಮಾಣದ ಹುಲ್ಲಿನ ಪೆಂಡಿಗಳು ಸುಟ್ಟು ಕರಕಲಾಗಿದೆ.
ಬೇಸಿಗೆ ಕಾಲದಲ್ಲಿ ದನ ಕರುಗಳಿಗೆ ಹುಲ್ಲನು ಮೇವು ಆಗಿ ಇಡಲಾದ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬಹಳಷ್ಟು ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ.ಈ ಬಗ್ಗೆ ನಾಗರಾಜ ಗುಬ್ಬಕ್ಕನವರ ತನಗೆ ಸುಮಾರು ಒಂದುಲಕ್ಷ ರೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಬೆಂಕಿ ನಂದಿಸುವಲ್ಲಿ ಕಾರ್ಯ ದಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ್ ಮೂಲಿಮನಿ, ಸಿಬ್ಬಂದಿ ಶಿವಾನಂದ ಹಿರೇಮಠ, ಅಡಿವೆಪ್ಪ ಕರುವಿನಕೊಪ್ಪ, ಮಹಾಬಲೇಶ್ವರ ಶಿವನಗುಡಿ, ವೆಂಕಟೇಶ ಪಟಗಿ, ಹರೀಶ ಪಟಗಾರ, ದುರಗಪ್ಪ ಹರಿಜನ, ಹಾಗೂ ಗ್ರಾಮಸ್ಥರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.