ಪ್ರವಾಹ ಪೀಡಿತ ಸಂತ್ರಸ್ತರಿಗೆ ಕಂಠಿ ಕಾಲೇಜು ವತಿಯಿಂದ ಒಂದು ಹೊತ್ತಿನ ಊಟೋಪಚಾರದ ವ್ಯವಸ್ಥೆ

ಮುಧೋಳ 12: ಮೇವಿಲ್ಲದೆ ಹಸಿವೆಯಿಂದ ಬಳುತ್ತಿದ್ದ ತಾಲೂಕಿನ ನೂರಾರು ನಿರಾಶ್ರೀತ ಗೋವುಗಳಿಗೆ  ಪಶುಖಾದ್ಯವನ್ನು ವಿತರಿಸಿ  ವಿಪ್ರ ಸಮಾಜದವರು ಮಾನವಿಯತೆ ಮೆರೆದಿದ್ದಾರೆ.

ತಾಲೂಕ ಬ್ರಾಹ್ಮಣ ಸಂಘ, ವಿಶ್ವ ಮಾದ್ವ ಮಹಾಪರಿಷತ್,  ದತ್ತ ಸೇವಾ ಸಮಿತಿ, ಸದ್ಧರ್ಮ ಮಂಡಳ,ಶಂಕರ ಸೇವಾ ಸಮಿತಿ,ಮುದ್ಗಲೇಶ್ವರ ಉತ್ಸವ ಸಮಿತಿ,   ಶಿವಮೊಗ್ಗಾದ ಮಾಲತೇಶ ದೇಶಪಾಂಡೆ  ಹಾಗೂ ಸ್ನೇಹಿತರು,  ಸಮಸ್ತ ವಿಪ್ರ ಬಾಂಧವರ ಸಹಾಯದಿಂದ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಾದ ಮುಧೋಳ, ಯಡಹಳ್ಳಿ ಇಂಗಳಗಿ,  ಮಳಲಿ, ಬಂಗಾರಬೆಂಚಿ,  ಬುದ್ನಿ ಬಿ.ಕೆ. ಮಾಲಾಪೂರ ಗೋಶಾಲೆಗಳಿಗೆ ತೆರಳಿ,  ಗೋವುಗಳಿಗೆ ಪಶುಖಾದ್ಯವನ್ನು ನೀಡಿದರು.      

             ಸತ್ಯಾತ್ಮ ತೀರ್ಥರ ಆಜ್ಞೆಯಂತೆ ಈ ಕಾರ್ಯ ಮಾಡಲಾಗಿದೆಂದು ಪಾಂಡುರಂಗಾಚಾರ್ಯ ಜೋಶಿ ತಿಳಿಸಿದರು. ವಲ್ಲಭ ಕವಠೇಕರ ಆನಂದ ಜೇರೆ, ಸುಬ್ಬಣ್ಣಾಚಾರ್ಯ ಮನಗೂಳಿ, ಗಿರೀಶ ಆನಿಖಿಂಡಿ ಬಳವಂತರಾವ ಕುಲಕಣರ್ಿ  ನಾರಾಯಣ ದೇಶಪಾಂಡೆ ನೇತೃತ್ವ ವಹಿಸಿದ್ದರು. ಬ್ರಾಹ್ಮಣ ಸಂಘದ ಅಧ್ಯಕ್ಷ ಅಶೋಕ ಕುಲಕಣರ್ಿ  ದನಿಗಳಿಗೆ ಕೃತಜ್ಞತೆ ಸಲ್ಲಿಸಿದರು . ಎಲ್ಲ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.  

      ನಗರದದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಎನ್.ಎಸ್.ಎಸ್ ಘಟಕ 1 ಮತ್ತು 2,ಯುವ ರೆಡ್ಕ್ರಾಸ್, ಭಾರತ ಸ್ಕೌಟ್ಸ್ ಆಂಡ್ ಗೈಡ್ಸ್ ವತಿಯಿಂದ  ತಾಲೂಕಿನ ಮಾಚಕನೂರ ಗ್ರಾಮದ ನೆರೆ ಸಂತ್ರಸ್ತರಿಗೆ ಒಂದು ಹೊತ್ತಿನ ಊಟೋಪಚಾರದ ವ್ಯವಸ್ಥೆ ಮಾಡಲಾಯಿತು. 

   ಕಾಲೇಜಿನ ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ ಅವರ ಸೂಚನೆ ಮೇರೆಗೆ  ಮಾಚಕನೂರ ಗ್ರಾಮದ ನೆರೆ ಸಂತ್ರಸ್ತರ ಸ್ಥಳಕ್ಕೆ ಭೇಟ್ಟಿ ನೀಡಿದ ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಸಂತ್ರಸ್ತರ ಜೊತೆ ಕೆಲಹೊತ್ತು ಮಾತನಾಡಿ ಅವರಿಗಾಗಿರುವ ತೊಂದರೆ ಮತ್ತು ಕಷ್ಟಗಳ ಕುರಿತು ಚಚರ್ಿಸಲಾಯಿತು.

  ನೂರಾರು ಸಂಖ್ಯೆಯ ಸಂತ್ರಸ್ತರಿಗೆ ಸಿದ್ದಪಡಿಸಿದ್ದ ಒಂದು ಹೊತ್ತಿನ ಊಟದ ವ್ಯವಸ್ಥೆಯನ್ನು ಮಾಡಲಾಯಿತು.

    ಎನ್ಎಸ್ಎಸ್ ಘಟಕ 1ರ ಕಾರ್ಯಕ್ರಮಾಧಿಕಾರಿ ಪ್ರೊ.ವ್ಹಿ.ಎಂ.ಕಿತ್ತೂರ,ಎನ್.ಎಸ್.ಎಸ್ ಘಟಕ 2ರ ಕಾರ್ಯಕ್ರಮಾಧಿಕಾರಿ ಪ್ರೊ.ಎಂ.ಎಚ್.ಪಾಟೀಲ, ಯುವ ರೆಡ್ ಕ್ರಾಸ್ ಸಂಯೋಜನಾಧಿಕಾರಿ ಪ್ರೊ.ಎಂ.ಎಚ್.ವಡ್ಡರ, ಭಾರತ ಸ್ಕೌಟ್ಸ್ ಆಂಡ್ ಗೈಡ್ಸ್ ಸಂಯೋಜನಾಧಿಕಾರಿ ಪ್ರೊ.ಎಂ.ಕೆ. ಗವಿಮಠ, ದೈಹಿಕ ನಿದರ್ೇಶಕ ಪ್ರೊ.ಎ.ವೈ.ಮುನ್ನೊಳ್ಳಿ, ಡಾ.ಎಂ.ಆರ್.ಜರಕುಂಟಿ, ಡಾ.ಅಪ್ಪು ರಾಠೋಡ, ಪ್ರೊ.ಎಂ.ಎಂ.ಹಿರೇಮಠ, ಪ್ರೊ.ಎ.ಎಚ್.ಹಿರೇಮಠ, ಪ್ರೊ.ಬಿ.ಎಲ್.ಲಿಂಗರಡ್ಡಿ, ಪ್ರೊ.ಎಂ.ಎಸ್.ಮೋದಿ, ಪ್ರೊ.ಬಿ.ಎಂ.ಇಂಗಳಗಿ, ಪ್ರೊ.ವ್ಹಿ.ಎಸ್.ಮುನವಳ್ಳಿ ಹಾಗೂ ಎನ್ಎಸ್ಎಸ್

 ವಿದ್ಯಾರ್ಥಿಗಳು ಹಾಗೂ ಗ್ರಾಮದ ಪ್ರಮುಖರಾದ ದುಂಡಪ್ಪ ದಾಸರಡ್ಡಿ,ಸದಾಶಿವ ಅಂತಾಪೂರ, ಗೋಪಾಲ ದಾಸರಡ್ಡಿ ಇತರರು ಉಪಸ್ಥಿತರಿದ್ದರು.