ಹುನಗುಂದ5: ಸರಕಾರಿ ಪ್ರಥಮ ದರ್ಜೆ ಕಾಲೇಜು ಹುನಗುಂದ ಐಕ್ಯೂಎಸಿ ಸಹಯೋಗದಲ್ಲಿ ವಿದ್ಯಾಥರ್ಿ ಕಲ್ಯಾಣ ಘಟಕ, ಪ್ಲೆಸ್ ಮೇಂಟ್ ಘಟಕ, ಎನ್.ಎಸ್.ಎಸ್ ಘಟಕ ಹಾಗೂ ವಾಣಿಜ್ಯ ವಿಭಾಗದಿಂದ ವ್ಯಕ್ತಿತ್ವ ವಿಕಾಸನದ ಒಂದು ದಿನದ ಕಾರ್ಯಾಗಾರವು ಜರುಗಿತು.
ಕಾರ್ಯಕ್ರಮದಲ್ಲಿ ಡಾ.ಎಸ್.ಎಲ್ ಪಾಟೀಲಯವರು "know yourself" ಎಂಬ ವಿಷಯದ ಬಗ್ಗೆ ಮಾತನಾಡಿ ಜೀವನದಲ್ಲಿ ಸದಾ ಯಶಸ್ಸು ಬೇಕನ್ನುವ ವ್ಯಕ್ತಿ ನಿರಂತರ ಪ್ರಯತ್ನಶೀಲನಾಗಿರಬೇಕೆಂದು ಸಾಧಿಸಲು ಹೊಸ ಮಾರ್ಗಗಳನ್ನು ಹುಡುಕಿಕೊಳ್ಳಬೇಕೆಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಪ್ರೊ. ಎಸ್.ಬಿ.ಚಳಗೇರಿ ದೈಹಿಕ ಶಿಕ್ಷಣ ನಿದರ್ೆಶಕರು ವ್ಹಿ.ಎಮ್.ಎಸ್.ಆರ್.ವಿ ಕಾಲೇಜು, ಹುನಗುಂದ ಇವರು ಮಾತನಾಡಿ ನಿಮ್ಮ ಜೀವನವನ್ನು ಯಾರೊಂದಿಗೂ ಹೋಲಿಸಬೇಡಿ ನಿಮ್ಮ ಅಮೂಲ್ಯವಾದ ಸಮಯವನ್ನು ಧನಾತ್ಮಕ ಯೋಚನೆಯನ್ನು ಮಾಡಿ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿ ನಿನ್ನೋಳಗಿನ ಕಿಚ್ಚಿನ ಕಿಡಿ ಬೆಳಗಿಸಿ ಎನ್ನಾದರೂ ಸಾಧಿಸುವಂತವರಾಗಿ ಎಂದು ವಿದ್ಯಾಥರ್ಿಗಳಿಗೆ ಹೇಳಿದರು.
ಪ್ರೊ. ಭಾಗ್ಯವತಿ ಹೆಚ್.ಆರ್ ಇವರು ಮಾತನಾಡಿ ಕಾಲೇಜಿನಲ್ಲಿ ಉದ್ಯೋಗ ಮಾರ್ಗದಶರ್ಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ವಿವಿಧ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ಸ್ಪಧರ್ಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿದ ಪ್ರೊ. ಎಸ್.ಕೆ.ಜಮಾದಾರವರು ಮಾತನಾಡಿ ಕಳೆದು ಹೋದ ಸಮಯವನ್ನು ಬದಲಾಯಿಸಲಾಗುವದಿಲ್ಲ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಮುಂದೆಸಾಗಿ ಎಂದು ಹೇಳಿದರು. ಐಕ್ಯೂಎಸಿ ಘಟಕದ ಸಂಚಾಲಕರಾದ ಪ್ರೊ. ಖಾಜಾವಲಿ ಈಚನಾಳ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಈ ಕಾರ್ಯಕ್ರಮದಲ್ಲಿ ಎಲ್ಲ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಯವರು ಹಾಗೂ ಎಲ್ಲ ವಿದ್ಯಾಥರ್ಿಗಳು ಭಾಗವಹಿಸಿದ್ದರು.