ಲೋಕದರ್ಶನ ವರದಿ
ಬೆಳಗಾವಿ 15: ಕಾಹೆರ್ ಉನ್ನತ ಶಿಕ್ಷಣ ಸಂಸ್ಥೆಯ ಶುಶ್ರೂಷಾ ಮಹಾವಿದ್ಯಾಲಯದ ಮಾನಸಿಕ ಆರೋಗ್ಯ ವಿಭಾಗದ ವತಿಯಿಂದ, ವಿಧಿವಿಜ್ಞಾನ ಮನೋವಿಜ್ಞಾನ ವಿಷಯವಾಗಿ ಒಂದು ದಿನದ ಶಿಕ್ಷಣ ಕಾಯರ್ಾಗಾರವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕುಷ್ಟರೋಗ, ಅಂಧತ್ವ ಮತ್ತು ಮಾನಸಿಕ ಆರೋಗ್ಯ ಅಧಿಕಾರಿ ಡಾ.ಚಾಂದನಿ ದೇವಡಿ ಅವರು ಮಾನಸಿಕ ಆರೋಗ್ಯದ ಮಹತ್ವದ ಕುರಿತಾಗಿ ಮಾತನಾಡಿದರು.
ಕೆ.ಎಲ್.ಇ. ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಮಾನಸಿಕ ರೋಗ ತಜ್ಞರಾಗಿರುವ ಡಾ.ಎನ್.ಎಮ್.ಪಾಟೀಲ್ ಅವರು ಮಾತನಾಡಿ ಮಾನಸಿಕ ಆರೋಗ್ಯ ಕಾಯ್ದೆ ಮತ್ತು ರಾಷ್ಟ್ರೀಯ ಆರೋಗ್ಯ ನೀತಿಗಳ ಕುರಿತಾಗಿ ಮಾಹಿತಿ ನೀಡಿದರು.
ಕಾಹೆರ್ ಉನ್ನತ ಶಿಕ್ಷಣ ಸಂಸ್ಥೆಯ ಶುಶ್ರೂಷಾ ಮಹಾವಿದ್ಯಾಲಯದ ಡೀನ್ ಮತ್ತು ಪ್ರಾಚಾರ್ಯರಾಗಿರುವ ಡಾ. ಸುಧಾ ರಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಶಿಕ್ಷಣ ಕಾಯರ್ಾಗಾರಕ್ಕಾಗಿ ಆಯ್ದುಕೊಳ್ಳಲಾಗಿರುವ ವಿಧಿವಿಜ್ಞಾನ ಮನೋವಿಜ್ಞಾನ ವಿಷಯದ ಪ್ರಸ್ತುತತೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮನೋವೈದ್ಯರಾದ ಡಾ.ಭೀಮಸೇನ ಟೆಕ್ಕಳಕಿ ,ಅಶೋಕ ಕಾಮತ್, ಮಂಜುನಾಥ ಸೊಗಲದ್, ಸುಷ್ಮಾ ಪಾಟೀಲ್ ಮತ್ತು ಸಂಗನಗೌಡ ಶಾನಭೋಗ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. 160 ಕ್ಕು ಅಧಿಕ ಅಭ್ಯಥರ್ಿಗಳು ಕಾಯರ್ಾಗಾರದ ಪ್ರಯೋಜನ ಪಡೆದರು. ಶುಶ್ರೂಷಾ ಮಹಾವಿದ್ಯಾಲಯದ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥರಾಗಿರುವ ಗುರುರಾಜ್ ಉಡುಪಿ ಸರ್ವರಿಗೆ ಸ್ವಾಗತ ಕೋರಿದರು. ಸಂಘಟನಾ ಕಾರ್ಯದಶರ್ಿ ಸುಷ್ಮಾ ಪಾಟೀಲ ವಂದನಾರ್ಪಣೆಗೈದರು.